ನ್ಯೂಯಾರ್ಕ್: ಅಮೆರಿಕದ ಹಿರಿಯ ಜೋಡಿ ತಾವು ಮೊದಲ ಬಾರಿಗೆ ಭೇಟಿಯಾದ ಸ್ಥಳದಲ್ಲಿ ಮದುವೆಯಾಗಿದ್ದಾರೆ. ಹಾಗೆಂದು ಇದು ಫ್ಯಾನ್ಸಿ ರೆಸ್ಟೋರೆಂಟ್ ಅಥವಾ ಥೀಮ್ ಪಾರ್ಕ್ ಎಂದು ನೀವು ಭಾವಿಸಿದರೆ ಖಂಡಿತಾ ತಪ್ಪು. ಅದು ಕಿರಾಣಿ ಅಂಗಡಿ !
ಅಂದಹಾಗೆ ಕಿರಾಣಿ ಅಂಗಡಿಯಲ್ಲಿ ಮದುವೆಯಾದ ಜೋಡಿಯ ವಯಸ್ಸೆಷ್ಟು ಗೊತ್ತಾ? ಅರಿಝೋನಾದ 78 ವರ್ಷದ ಡೆನ್ನಿಸ್ ಡೆಲ್ಗಾಡೊ ಮತ್ತು 72 ವರ್ಷದ ಬ್ರೆಂಡಾ ವಿಲಿಯಮ್ಸ್. ಇವರು ಇದೇ 19ರಂದು ಕಿರಾಣಿ ಅಂಗಡಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಸಾ ಗ್ರಾಂಡೆಯಲ್ಲಿರುವ ಫ್ರೈಸ್ ಫುಡ್ ಅಂಡ್ ಡ್ರಗ್ ಸ್ಟೋರ್‌ನಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ಭೇಟಿಯಾಗಿದ್ದರು. ಇಬ್ಬರೂ ಒಂಟಿಯಾಗಿರುವುದು ತಿಳಿಯಿತು. ಶೀಘ್ರದಲ್ಲೇ ಡೇಟಿಂಗ್ ಪ್ರಾರಂಭಿಸಿದರು.
ಒಂದು ವರ್ಷದ ಡೇಟಿಂಗ್ ಬಳಿಕ ಜೋಡಿ ಮದುವೆಯಾಗಲು ನಿಶ್ಚಯಿಸಿದ್ದು, ಅಲ್ಲಿಯೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲು ಅವರು ಉಂಗುರ ಬದಲಿಸಿ ನಿಶ್ಚತಾರ್ಥವನ್ನೂ ಮಾಡಿಕೊಂಡಿದ್ದಾರೆ.