ಇತ್ತೀಚೆಗೆ ತಾಜ್‌ಮಹಲ್‌ಗೆ ಭೇಟಿ ನೀಡಿದ ಅರ್ಜೆಂಟೀನಾದ ಪ್ರವಾಸಿಗರಿಗೆ ಕೋವಿಡ್-19 ಸೋಂಕು ದೃಢಪಡ್ತಿದ್ದಂತೆ ಪ್ರವಾಸಿಗ ನಾಪತ್ತೆಯಾಗಿದ್ದಾರೆ.
ಡಿಸೆಂಬರ್ 26 ರಂದು ತಾಜ್ ಮಹಲ್ ಗೆ ಭೇಟಿ ನೀಡಿದ್ದ ಪ್ರವಾಸಿಗನಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು. ಪರೀಕ್ಷೆ ಫಲಿತಾಂಶದ ಬಗ್ಗೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದ ನಂತರ ಪ್ರವಾಸಿಗ ನಾಪತ್ತೆಯಾಗಿದ್ದಾರೆ ಎಂದು ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರು ತಪ್ಪಾದ ಫೋನ್ ಸಂಖ್ಯೆ ಮತ್ತು ತಪ್ಪಾದ ಹೋಟೆಲ್ ವಿಳಾಸವನ್ನು ಒದಗಿಸಿರೋದ್ರಿಂದ ಅಧಿಕಾರಿಗಳಿಗೆ ಅವನನ್ನು ಪತ್ತೆಹಚ್ಚಲು ಕಷ್ಟಕರವಾಗಿದೆ. ನಾಪತ್ತೆಯಾದ ವ್ಯಕ್ತಿಯ ವಿವರಗಳನ್ನು ಪಡೆಯಲು ಆರೋಗ್ಯ ಇಲಾಖೆ ಇದೀಗ ಸ್ಥಳೀಯ ಗುಪ್ತಚರ ಘಟಕ, ವಿಮಾನ ನಿಲ್ದಾಣ ಪ್ರಾಧಿಕಾರ, ಎಎಸ್‌ಐ ಮತ್ತು ಹತ್ತಿರದ ಹೋಟೆಲ್‌ಗಳನ್ನು ಸಂಪರ್ಕಿಸಿದೆ.
ಆಗ್ರಾದ ಮುಖ್ಯ ವೈದ್ಯಾಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಮಾತನಾಡಿ, “ಕೋವಿಡ್-19 ಪಾಸಿಟಿವ್ ಬಂದಿರುವ ಅರ್ಜೆಂಟೀನಾದ ಪ್ರವಾಸಿಗರನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ನೀಡಿದ ಸಂಪರ್ಕ ವಿವರಗಳು ತಪ್ಪಾಗಿದೆ. ಅರ್ಜೆಂಟೀನಾದಿಂದ ಬಂದ ಪ್ರವಾಸಿಗರ ವಿವರಗಳನ್ನು ಒದಗಿಸಲು ಹೋಟೆಲ್‌ಗಳಿಗೆ ತಿಳಿಸಲಾಗಿದೆ. ವ್ಯಕ್ತಿಯ ವಿವರಗಳನ್ನು ಪಡೆಯಲು ನಾವು ASI ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರವನ್ನು ಸಹ ಸಂಪರ್ಕಿಸಿದ್ದೇವೆ. ಅವರು ಪತ್ತೆಯಾದರೆ ರೋಗವು ಮತ್ತಷ್ಟು ಹರಡುವುದನ್ನು ತಡೆಯಲು ಆತನನ್ನು ಪ್ರತ್ಯೇಕಿಸಲಾಗುತ್ತದೆ.” ಎಂದಿದ್ದಾರೆ.