
ದಾವಣಗೆರೆ: ಬೆಂಕಿ ಅವಘಡದಿಂದಾಗಿ ಅಡಿಕೆ ತೋಟವೇ ಸಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ನಡೆದಿದೆ.
ರೈತ ಬಸವನಗೌಡ ಹಾಗೂ ಶಾಂತಮ್ಮ ಎಂಬುವವರಿಗೆ ಸೇರಿದ 650 ಅಡಿಕೆ ಗಿಡಗಳು ಸಂಪುರ್ಣ ನಾಶವಾಗಿವೆ. ಜಮೀನಿನಲ್ಲಿದ್ದ ಬೋರ್ ವೆಲ್ ಆನ್ ಮಡಿದಾಕ್ಷಣ ಬೆಂಕಿ ಕಾಣಿಸಿಕೊಂಡಿದ್ದು, ಅಡಿಕೆ ತೋಟದಲ್ಲಿ ಬೆಳೆದಿದ್ದ ಕಳೆ ತೆಗೆದ ಪರಿಣಾಮ ಒಣಗಿದ ಹುಲ್ಲುಗಳಿಗೆ ಬೆಂಕಿ ಹೊತ್ತಿಕೊಂಡು ಇಡೀ ತೋಟಕ್ಕೆ ಬೆಂಕಿ ವ್ಯಾಪಿಸಿದೆ.
ಒಂದೂವೆರೆ ಎಕರೆಯಲ್ಲಿದ್ದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಸ್ಕಾಂ ನಿಂದ ರೈತರಿಗೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಶಾಸಕ ಬಿ.ದೇವಪ್ಪ, ರೈತನಿಗೆ ವೈಯಕ್ತಿಕವಾಗಿ 50,000 ರೂ ನೆರವು ನೀಡಿದ್ದಾರೆ.