ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಗೆ ಅನುವಂಶಿಯತೆ ಅಥವಾ ಆಹಾರ ಪದ್ದತಿಯು ಕಾರಣವಾಗಿರಬಹುದು. ವಿಟಮಿನ್ ಬಿ ಕೊರತೆ ಕೂಡ ಬಿಳಿ ಕೂದಲಿನ ಸಮಸ್ಯೆಗೆ ಕಾರಣವಾಗಬಹುದು. ಅದರ ಪರಿಹಾರ ಇಲ್ಲಿದೆ.
ಕಿತ್ತಳೆ ಹಣ್ಣು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಇದರ ಸೇವನೆಯಿಂದ ಕೂದಲು ಬಿಳಿಯಾಗುವುದನ್ನು ಮಾತ್ರವಲ್ಲ ಕೂದಲು ಉದುರುವುದನ್ನು ನಿಲ್ಲಿಸಬಹುದು.
ಹುಳಿ ಬೆರೆಸಿದ ಆಹಾರಗಳನ್ನು ಸೇವಿಸುವುದರಿಂದ ಬಿಳಿ ಕೂದಲಿನ ಸಮಸ್ಯೆ ತಡೆಗಟ್ಟಬಹುದು. ಮೊಸರು, ಇಡ್ಲಿ, ದೋಸೆ, ಸೋಯಾ, ಉಪ್ಪಿನಕಾಯಿ ಮೊದಲಾದವುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಈ ಬ್ಯಾಕ್ಟೀರಿಯಾಗಳು ದೇಹದಲ್ಲಿ ಬಯೋಟಿನ್ ಮತ್ತು ವಿಟಮಿನ್ ಡಿ ಪೋಷಕಾಂಶಗಳನ್ನು ಉತ್ಪಾದಿಸುತ್ತದೆ. ಮೊಟ್ಟೆಯನ್ನು ನಿಯಮಿತವಾಗಿ ತಿನ್ನುವುದರಿಂದಲೂ ಈ ಸಮಸ್ಯೆ ನಿವಾರಣೆಯಾಗುತ್ತದೆ.