ಕೆಲವರಿಗೆ ರಾತ್ರಿ ಮಲಗಿದಾಕ್ಷಣ ನಿದ್ದೆಯೇನೋ ಬರುತ್ತದೆ. ಆದರೆ ರಾತ್ರಿ ಪದೇ ಪದೇ ಎಚ್ಚರವಾಗುತ್ತದೆ. ಸಣ್ಣ ಸದ್ದಿಗೂ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ದೆ ಬರುವುದೇ ಇಲ್ಲ ಎಂಬಂತಾಗುತ್ತದೆ. ಒತ್ತಡವೇ ಇದಕ್ಕೆ ಮುಖ್ಯ ಕಾರಣ ಎಂಬುದು ನಿಮಗೆ ತಿಳಿದಿರಲಿ.
40 ವರ್ಷ ದಾಟಿದವರಲ್ಲಿ ಇದೊಂದು ಸಾಮಾನ್ಯ ಲಕ್ಷಣವಾಗಿದ್ದು ಕೆಲವೊಮ್ಮೆ ಮಧ್ಯರಾತ್ರಿ ವಿಪರೀತ ಬೆವರಿ ನೀರು ಇಳಿಯುತ್ತದೆ. ಹೀಗೆ ಎಚ್ಚರವಾದರೆ ಮತ್ತೆ ನಿದ್ದೆ ಬರದೇ ಇರುವುದು ಒಂದು ಸಾಮಾನ್ಯ ಲಕ್ಷಣ.
ರಾತ್ರಿ ಮಲಗುವ ಕನಿಷ್ಠ ಎರಡು ಗಂಟೆ ಮೊದಲೇ ನಿಮ್ಮ ಊಟ ಮುಗಿಸಿ. ಮಲಗುವ ಮುನ್ನ ಹತ್ತು ನಿಮಿಷದ ಸಣ್ಣ ವಾಕಿಂಗ್ ಮಾಡಿ. ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಬನ್ನಿ. ಇದರಿಂದ ದೇಹಕ್ಕೆ ಆರಾಮ ಸಿಕ್ಕಿ ಉತ್ತಮ ನಿದ್ದೆ ನಿಮ್ಮದಾಗುತ್ತದೆ.
ನಿಮಗೆ ಇಷ್ಟವಾಗುವ ಹಾಡು ಕೇಳಿ. ಇದರಿಂದಲೂ ನೀವು ಒತ್ತಡ ಮುಕ್ತರಾಗಿ ಮಲಗಬಹುದು. ಬೆಡ್ ಸಮೀಪದಲ್ಲಿ ಮೊಬೈಲ್ ಇಟ್ಟುಕೊಳ್ಳದಿರಿ. ಮಲಗುವ ಕನಿಷ್ಠ ಅರ್ಧ ಗಂಟೆ ಮೊದಲೇ ಮೊಬೈಲ್ ಆಫ್ ಮಾಡಿ.
ಬೆಡ್ ರೂಮ್ ಸ್ವಚ್ಛವಾಗಿ ಇಟ್ಟುಕೊಳ್ಳಿ. ಕಿಟಕಿಗೆ ದಪ್ಪನೆಯ ಪರದೆ ಹಾಕಿ. ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ. ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದರೆ ಮೊದಲು ಬಿಡಿ.