ಪ್ರತಿನಿತ್ಯ ಸ್ನಾನ ಮಾಡುವುದು, ಹಲ್ಲು ಉಜ್ಜುವುದು, ದೇಹವನ್ನು ಸ್ವಚ್ಚವಾಗಿಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಸೋಮಾರಿತನದಿಂದ ಪ್ರತಿ ದಿನ ಸ್ನಾನ ಮಾಡುವುದಿಲ್ಲ. ಇನ್ನು ಕೆಲವರು ಸ್ನಾನದ ಜೊತೆ ಹಲ್ಲು ಕೂಡ ಉಜ್ಜುವುದಿಲ್ಲ. ಪ್ರತಿ ದಿನ ಹಲ್ಲುಜ್ಜದ ಜನರಿಗೆ ಇಲ್ಲೊಂದು ಕುತೂಹಲಕಾರಿ ಮಾಹಿತಿಯಿದೆ. ಒಬ್ಬ ವ್ಯಕ್ತಿ 1 ತಿಂಗಳು ನಿರಂತರವಾಗಿ ಬ್ರಷ್ ಮಾಡದಿದ್ದರೆ, ಅವನ ಹಲ್ಲುಗಳಿಗೆ ಏನಾಗುತ್ತದೆ ಎಂಬ ಸಂಗತಿ ಕೇಳಿದ್ರೆ ದಂಗಾಗ್ತಿರಾ.
ಒಂದು ದಿನ ಹಲ್ಲುಜ್ಜದೆ ಹೋದ್ರೂ ಬಾಯಲ್ಲಿ ವಾಸನೆ ಬರುತ್ತದೆ. ಇನ್ನು ಒಂದು ತಿಂಗಳ ಕಾಲ ಹಲ್ಲುಜ್ಜದಿದ್ದರೆ ಬಾಯಿಯಿಂದ ಎಷ್ಟು ವಾಸನೆ ಬರಬಹುದು ಎಂದು ನೀವೆ ಅಂದಾಜಿಸಿ. ಇದರ ಹೊರತಾಗಿ ಹಲ್ಲುಗಳಿಗೆ ಸಾಕಷ್ಟು ಹಾನಿಯಾಗುತ್ತದೆ. ಹಲ್ಲುಗಳ ಮೇಲೆ ಗಟ್ಟಿಯಾದ ಕೊಳಕು ನಿಲ್ಲುತ್ತದೆ. ಎಷ್ಟು ಬಾರಿ ಹಲ್ಲುಜ್ಜಿದರೂ ಈ ಕೊಳಕನ್ನು ಹೋಗಲಾಡಿಸಲು ಸಾಧ್ಯವಿಲ್ಲ .ಹಲ್ಲುಗಳ ಬಿಳಿ ಬಣ್ಣ ಮಾಯವಾಗುತ್ತದೆ.
ಒಂದು ತಿಂಗಳು ಹಲ್ಲುಜ್ಜದೆ ಇದ್ದರ, ಹಲ್ಲುಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಈಗಾಗಲೇ ಹಲ್ಲುಗಳಲ್ಲಿ 700 ವಿಧದ ಸುಮಾರು 6 ಮಿಲಿಯನ್ ಬ್ಯಾಕ್ಟೀರಿಯಾಗಳಿವೆ. ಬ್ರಷ್ ಮಾಡದಿದ್ದರೆ ಅವುಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಹಲ್ಲು ಹಾಳು ಮಾಡುವ ಜೊತೆಗೆ ಒಸಡನ್ನು ದುರ್ಬಲಗೊಳಿಸುತ್ತವೆ. ಆಹಾರ ಸೇವನೆ ಕಷ್ಟವಾಗುತ್ತದೆ.
ದಿನಕಳೆದಂತೆ ಬ್ಯಾಕ್ಟೀರಿಯಾ ಮತ್ತು ರೋಗಗಳ ವಿರುದ್ಧ ಹೋರಾಡುವ ಹಲ್ಲಿನ ಶಕ್ತಿ ಕಡಿಮೆಯಾಗುತ್ತದೆ. ಹಲ್ಲು ಉದುರಲು ಶುರುವಾಗುತ್ತದೆ.