ಏಪ್ರಿಲ್ ತಿಂಗಳು ಸಮೀಪಿಸುತ್ತಿದೆ. ಬೇಸಿಗೆ ಬಿಸಿ ಹೆಚ್ಚಾಗ್ತಿದೆ. ಬಿಸಿಲಿನಿಂದ ಮುಕ್ತಿ ಪಡೆಯಲು ಅನೇಕರು ಫ್ಯಾನ್, ಕೂಲರ್, ಎಸಿ ಖರೀದಿಗೆ ಮುಂದಾಗ್ತಿದ್ದಾರೆ. ನೀವೂ ಎಸಿ ಖರೀದಿ ಆಲೋಚನೆಯಲ್ಲಿದ್ದರೆ ಖರೀದಿಗೂ ಮುನ್ನ ಈ ವಿಷ್ಯಗಳನ್ನು ತಿಳಿದಿರಿ.
ಎಸಿ ಸಾಮರ್ಥ್ಯ ಕೋಣೆ ಗಾತ್ರವನ್ನು ಅವಲಂಬಿಸಿರುತ್ತದೆ. ಕೊಠಡಿಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಹೊಂದಿಕೆಯಾಗುವ ಎಸಿಯನ್ನು ಖರೀದಿ ಮಾಡಿ. ಕೋಣೆ 100-120 ಚದರ ಅಡಿ ಇದ್ದರೆ 1 ಟನ್ ಸಾಮರ್ಥ್ಯದ ಎಸಿ ಖರೀದಿ ಮಾಡಿ.
ವಿಂಡೋ ಎಸಿ, ಸ್ಪ್ಲಿಟ್ ಎಸಿಗಿಂತ ಅಗ್ಗವಾಗಿರುತ್ತದೆ. ವಿಂಡೋ ಎಸಿ ಸಿಂಗಲ್ ಯುನಿಟ್ ನಲ್ಲಿ ಬರುತ್ತದೆ. ನಿಮಗೆ ಯಾವುದು ಅನುಕೂಲ ಎಂಬುದನ್ನು ನೋಡಿ ಎಸಿ ಖರೀದಿ ಮಾಡಿ.
ಎನರ್ಜಿ ಸೇವಿಂಗ್ ವಿಚಾರಕ್ಕೆ ಬಂದ್ರೆ ಎಸಿ ಸೇರಿದಂತೆ ಗೃಹ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಬಿಇಇ ರೇಟಿಂಗ್ ನಲ್ಲಿ ಬರುತ್ತವೆ. ಫೈವ್ ಸ್ಟಾರ್ ರೇಟಿಂಗ್ ನ ಎಸಿಗಳು ಹೆಚ್ಚು ಶಕ್ತಿಯನ್ನು ಉಳಿಸುತ್ತವೆ ಜೊತೆಗೆ ದುಬಾರಿಯೂ ಹೌದು.
ಇನ್ವರ್ಟರ್ ಎಸಿಯನ್ನು ಖರೀದಿ ಮಾಡುವುದು ಬಹಳ ಒಳ್ಳೆಯದು. ಇದು ನಿರಂತರ ವೇಗವನ್ನು ಹೊಂದಿದ್ದು, ಕಡಿಮೆ ವಿದ್ಯುತ್ ಸಾಕಾಗುತ್ತದೆ.