ತಾಯಿಯ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೇಲೆ ಕೆಲವು ಮಕ್ಕಳಿಗೆ ಬೆರಳು ಚೀಪುವ ಅಭ್ಯಾಸ ಶುರುವಾಗಿಬಿಡುತ್ತೆ. ಇಂತಹ ಮಕ್ಕಳು ತಾತ್ಕಾಲಿಕವಾಗಿ ಬೆರಳು ಚೀಪುವಾಗ ಸುಮ್ಮನೆ ಕೂರುತ್ತಾರಾದರೂ, ಕ್ರಮೇಣ ಇದೊಂದು ಚಟವಾಗಿ ಪೋಷಕರಿಗೆ ತಲೆನೋವಾಗಿ ಪರಿಣಮಿಸುತ್ತದೆ.
ಇಂತಹ ಮಕ್ಕಳನ್ನು ಹೆದರಿಸಿ, ಬೆದರಿಸಿ ಪ್ರಯೋಜನವಿಲ್ಲ. ಕೆಲವು ಉಪಾಯಗಳಿಂದ ನಿಧಾನವಾಗಿ ಈ ಅಭ್ಯಾಸವನ್ನು ತಪ್ಪಿಸಬಹುದು.
ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದೆಯೇ ಎಂದು ಖಾತ್ರಿ ಮಾಡಿಕೊಳ್ಳಿ.
ಮಕ್ಕಳ ಕೈಗಳಿಗೆ ಗ್ಲೌಸ್ ತೊಡಿಸಿ.
ಕೈ ಬೆರಳುಗಳಿಗೆ ಸಾಕಷ್ಟು ಚಟುವಟಿಕೆ ಇರುವ ಆಟಿಕೆಗಳನ್ನು ಕೊಡಿ. ಉದಾಹರಣೆಗೆ ಫಜಲ್ ಜೋಡಿಸುವುದು, ಬ್ಲಾಕ್ಸ್ ಜೋಡಿಸುವುದು, ಚಿತ್ರಗಳಿಗೆ ಬಣ್ಣ ತುಂಬುವುದು ಹೀಗೆ.
ಸದಾ ಬೆರಳು ಚೀಪುತ್ತಿದ್ದರೆ ಹಲ್ಲುಗಳು ಉಬ್ಬಾಗಿ ಮುಖದ ಅಂದ ಕೆಡಬಹುದು ಎಂದು ಮಕ್ಕಳಿಗೆ ಅರ್ಥವಾಗುವಂತೆ ತಿಳಿ ಹೇಳಿ.