ಕೋವಿಡ್ ಸಾಂಕ್ರಮಿಕದ ಕಾರಣದಿಂದ ಜನರು ಹಿಂದೆಂದಿಗಿಂತಲೂ ಹೆಚ್ಚಾಗಿ ಆನ್ಲೈನ್ನಲ್ಲೇ ತಮ್ಮೆಲ್ಲಾ ವ್ಯವಹಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸೈಬರ್ ಕಳ್ಳರಿಗೆ ಭಾರೀ ಅವಕಾಶಗಳು ಸೃಷ್ಟಿಯಾಗಿವೆ.
ಡೇಟಿಂಗ್ ಅಪ್ಲಿಕೇಶನ್ಗಳು ಸೈಬರ್ ಕಳ್ಳತನದಿಂದ ಭಾರೀ ಹೊಡೆತ ತಿನ್ನುತ್ತಿದ್ದು, ಇವುಗಳ ಬಳಕೆದಾರರ ಮಾಹಿತಿಗಳ ಸುರಕ್ಷತೆ ಬಗ್ಗೆ ಸಾಕಷ್ಟು ಕಾಳಜಿ ವ್ಯಕ್ತವಾಗಿದೆ. ಈ ಕುರಿತು ಅಧ್ಯಯನವೊಂದನ್ನು ನಡೆಸಿದ ಕ್ಯಾಸ್ಪರ್ಸ್ಕೀ, ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ಗಳಾದ ಟಿಂಡರ್, ಬಂಬಲ್, ಓಕೆಕ್ಯುಪಿಡ್, ಮಾಂಬಾ ಪ್ಯೂರ್, ಫೀಲ್ಡ್, ಹರ್, ಹ್ಯಾಪ್ನ್ ಹಾಗೂ ಬಡೂ ಪೋರ್ಟಲ್ಗಳು ಅದೆಷ್ಟು ಸುರಕ್ಷಿತ ಎಂದು ಅರಿಯಲು ಯತ್ನಿಸಿದೆ.
ವೀಕೆಂಡ್ ಮಸ್ತಿಯಲ್ಲಿ ಕೊರೊನಾ ಮರೆತ ಜನ: ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ
ಬಹುತೇಕ ಎಲ್ಲಾ ಡೇಟಿಂಗ್ ಅಪ್ಲಿಕೇಶನ್ಗಳು ತಮ್ಮ ಬಳಕೆದಾರರಿಗೆ ಫೇಸ್ಬುಕ್, ಇನ್ಸ್ಟಾಗ್ರಾಂ, ಸ್ಪಾಟಿಫೈಗಳಂಥ ಸಾಮಾಜಿಕ ಜಾಲತಾಣಗಳ ಮೂಲಕ ಲಾಗಿನ್ ಆಗಲು ಅವಕಾಶ ಕೊಡುವ ಕಾರಣ, ಬಳಕೆದಾರರ ಪ್ರೊಫೈಲ್ಗಳು, ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅವರ ವೈಯಕ್ತಿಕ ಮಾಹಿತಿ ಆಧರಿಸಿ ಭರ್ತಿಯಾಗಿಬಿಡುತ್ತವೆ.
ಇದಲ್ಲದೇ ಬಳಕೆದಾರರು ತಮ್ಮ ಶೈಕ್ಷಣಿಕ ವಿವರಗಳೊಂದಿಗೆ ತಾವು ಓದಿದ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಲು ಈ ಅಪ್ಲಿಕೇಶನ್ಗಳು ಕೇಳುತ್ತವೆ. ಕೆಲವೊಂದು ಅಪ್ಲಿಕೇಶನ್ಗಳು ಇನ್ನೂ ಮುಂದೆ ಹೋಗಿ ಬಳಕೆದಾರರ ಲೈವ್ ಲೊಕೇಶನ್ಅನ್ನೂ ಕೇಳುತ್ತವೆ.
ಹೀಗಾಗಿ, ಈ ಡೇಟಿಂಗ್ ಅಪ್ಲಿಕೇಶನ್ಗಳನ್ನು ಬಳಸುವ ಮಂದಿ ಇನ್ನು ಮುಂದೆ ಸಾಕಷ್ಟು ಜಾಗತೂಕತೆಯಿಂದ ಅವುಗಳ ಖಾಸಗೀತನ ಸಂಬಂಧಿ ನಿಯಮಾವಳಿಗಳನ್ನು ಓದಿಕೊಂಡು, ಯಾವೆಲ್ಲಾ ಮಾಹಿತಿಗಳನ್ನು ಅಲ್ಲಿ ಹಂಚಿಕೊಳ್ಳಬೇಕೆಂದು ಸೂಕ್ಷ್ಮವಾಗಿ ಅವಲೋಕನ ಮಾಡಿ ಮುಂದುವರೆಯಬೇಕಾಗಿದೆ.