ಬೇಸಿಗೆ ಕಾಲದಲ್ಲಿ ಬೆವರುವುದು ಸಾಮಾನ್ಯ. ಆದರೆ ರಾತ್ರಿ ಫ್ಯಾನ್ ಕೆಳಗಡೆ ಅಥವಾ ಎಸಿ ಹಾಕಿಕೊಂಡು ಮಲಗಿದರೂ ಕೆಲವರಿಗೆ ವಿಪರೀತ ಬೆವರುತ್ತದೆ. ಹೀಗಾದಲ್ಲಿ ಅದು ನಿಜಕ್ಕೂ ಚಿಂತೆಯ ವಿಷಯ. ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಯಾಕಂದ್ರೆ ಈ ರೀತಿಯ ಅಸಹಜ ಬೆವರುವಿಕೆ ಅಪಾಯಕಾರಿ ಗಂಭೀರ ಕಾಯಿಲೆಯ ಸಂಕೇತ. ಈ ರೋಗವು ಸಣ್ಣ ಕಾಯಿಲೆಯಲ್ಲ, ಕ್ಯಾನ್ಸರ್ ಅನ್ನೋದು ನಿಜಕೂ ಆಘಾತಕಾರಿ ಸಂಗತಿ.
ಕ್ಯಾನ್ಸರ್ ಹೆಸರು ಕೇಳಿದ್ರೇನೆ ಕೆಲವರು ಟೆನ್ಶನ್ ಆಗುತ್ತಾರೆ. ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಈ ರೋಗವು ಇಡೀ ದೇಹದಲ್ಲಿ ಹರಡಿದಾಗ ಮಾತ್ರ ರೋಗಲಕ್ಷಣಗಳನ್ನು ಸರಿಯಾಗಿ ಗುರುತಿಸಬಹುದು. ಆದಾಗ್ಯೂ, ಈ ರೋಗವು ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ, ಅದರ ಚಿಕಿತ್ಸೆಯು ತುಂಬಾ ಸುಲಭವಾಗುತ್ತದೆ. ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಲು, ದೇಹದಲ್ಲಿ ಕಂಡುಬರುವ ಸಣ್ಣ ಬದಲಾವಣೆಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು.
ರಾತ್ರಿ ಬೆವರುವುದು ಕ್ಯಾನ್ಸರ್‌ನ ಸಂಕೇತವಾಗಿದೆ. ವಿಶ್ವದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಯೊಂದು ಕಾಯಿಲೆಯಂತೆ, ಈ ರೋಗದ ಕೆಲವು ಆರಂಭಿಕ ಲಕ್ಷಣಗಳು ಸಹ ದೇಹದಲ್ಲಿ ಕಂಡುಬರುತ್ತವೆ, ಉದಾಹರಣೆಗೆ ರಾತ್ರಿಯಲ್ಲಿ ಅತಿಯಾದ ಬೆವರುವುದು. ಆರೋಗ್ಯ ತಜ್ಞರ ಪ್ರಕಾರ, ರಾತ್ರಿಯಲ್ಲಿ ಅತಿಯಾಗಿ ಬೆವರುವುದು ಲ್ಯುಕೇಮಿಯಾ, ಕಾರ್ಸಿನಾಯ್ಡ್ ಟ್ಯೂಮರ್, ಲಿಂಫೋಮಾ, ಲಿವರ್ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಮೆಸೊಥೆಲಿಯೊಮಾ ಇತ್ಯಾದಿಗಳ ಸಂಕೇತವಾಗಿದೆ.
ಕ್ಯಾನ್ಸರ್ ಲಕ್ಷಣಗಳು
ದೇಹದ ಯಾವುದೇ ಭಾಗದಲ್ಲಿ ಗಡ್ಡೆ
ತೂಕದ ಹಠಾತ್ ನಷ್ಟ
ಯಾವುದೇ ಕಾರಣವಿಲ್ಲದೆ ದಣಿದ ಭಾವನೆ
ಚರ್ಮದ ಬದಲಾವಣೆಗಳು
ನರಹುಲಿಗಳು ಅಥವಾ ಮೋಲ್ಗಳ ವಿನ್ಯಾಸ ಅಥವಾ ಬಣ್ಣದಲ್ಲಿ ಬದಲಾವಣೆ
ನುಂಗಲು ತೊಂದರೆ
ಸ್ನಾಯು ನೋವು
ಪದೇ ಪದೇ ಅಜೀರ್ಣ ಸಮಸ್ಯೆ
ರಾತ್ರಿ ಬೆವರುವಿಕೆ
ಉಸಿರಾಟದಲ್ಲಿ ತೊಂದರೆ