
ಮೊದಲನೇ ಮಗುವಾದ ಬಳಿಕ ಸಹಜವಾಗಿಯೇ ಇನ್ನೊಂದು ಮಗು ಬೇಕು ಎಂಬ ಆಸೆ ಇರುತ್ತದೆ. ಒಂದೇ ಮಗು ಸಾಕು ಎನ್ನುತ್ತಿದ್ದವರೆಲ್ಲರೂ ಈಗ ಮಕ್ಕಳೆರಡು ಇರಲಿ ಎನ್ನುತ್ತಿದ್ದಾರೆ. ಆದರೆ ಈ ಎರಡನೇ ಮಗು ಮಾಡಿಕೊಳ್ಳುವಾಗ ಕೆಲವೊಂದು ವಿಷಯಗಳ ಕುರಿತು ಗಮನ ಹರಿಸಬೇಕು.
ಮೊದಲನೇ ಮಗುವಾದ ಬಳಿಕ ಸದ್ಯಕ್ಕೆ ಇನ್ನೊಂದು ಮಗು ಬೇಡ. ಸ್ವಲ್ಪ ವರ್ಷ ಬಿಟ್ಟು ಮಾಡಿಕೊಂಡರಾಯಿತು ಎಂದು ದಿನ ಮುಂದಕ್ಕೆ ಹಾಕುತ್ತಿದ್ದರೆ ನಿಮ್ಮ ವರ್ಷ ಕೂಡ ಮುಂದಕ್ಕೆ ಹೋಗುತ್ತಾ ಇರುತ್ತದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಿ. ಈಗಿನ ಜೀವನ ಶೈಲಿ, ಆಹಾರ ಪದ್ಧತಿ ಗರ್ಭಧಾರಣೆಗೆ ಸಮಸ್ಯೆ ತಂದೊಡ್ಡುತ್ತಿದೆ ಎಂಬುದು ನಿಮ್ಮ ಗಮನದಲ್ಲಿರಲಿ.
ಇನ್ನು ಮೊದಲನೇ ಮಗು ಗಂಡು ಆಗಿದ್ದರೆ ಇನ್ನೊಂದು ಹೆಣ್ಣು ಬೇಕು ಆಸೆ ಇರುತ್ತದೆ ಹಾಗೇ ಹೆಣ್ಣಾಗಿದ್ದರೆ ಗಂಡು ಬೇಕು ಎಂಬ ಆಸೆ ಇರುತ್ತದೆ. ನಮ್ಮ ಆಸೆಗೆ ತಕ್ಕ ಹಾಗೇ ಎಲ್ಲವೂ ಆಗುವುದಿಲ್ಲ. ಹಾಗಾಗಿ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೇ ಏನಾದರು ಆಗಲಿ ಆರೋಗ್ಯಕರವಾದ ಮಗು ಜನಿಸಲಿ ಎಂಬ ಮನೋಭಾವ ಇಟ್ಟುಕೊಳ್ಳಿ.
ಇನ್ನು ಎರಡನೇ ಮಗು ಬಂದ ಬಳಿಕ ಮೊದಲನೇ ಮಗುವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಇದರಿಂದ ಆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ನಿನ್ನ ತಮ್ಮ/ತಂಗಿ ಎಂದು ತಿಳಿ ಹೇಳಿ, ಅವರಿಗೂ ಆ ಮಗುವನ್ನು ಮುದ್ದು ಮಾಡುವುದಕ್ಕೆ ಅವಕಾಶ ನೀಡಿ. ಆಗ ಆ ಮಗುವನ್ನು ದೊಡ್ಡ ಮಕ್ಕಳು ಇಷ್ಟಪಡುತ್ತಾರೆ.