ಯಾವುದರ ಮೇಲೂ ಆಸಕ್ತಿ ಇಲ್ಲ, ಸದಾಕಾಲ ಏನೋ ಅವ್ಯಕ್ತ ಒತ್ತಡ, ಏನೇ ಕೆಲಸ ಮಾಡಬೇಕೆಂದರೂ ಧೈರ್ಯ ಸಾಲುತ್ತಿಲ್ಲ, ಜೀವನದಲ್ಲಿ ಹೊಸ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆತ್ಮವಿಶ್ವಾಸದ ಕೊರತೆ ಈ ಎಲ್ಲಾ ಭಾವತೀವ್ರತೆಗಳನ್ನು ನೀವು ಅನುಭವಿಸುತ್ತೀದ್ದೀರಾ? ಹಾಗಾದ್ರೆ ಮೊದಲು ನಿಮ್ಮ ದೇಹದಲ್ಲಿ ಪಿತ್ತ ಸಮತೋಲನವಾಗಿದೆಯೇ ಎಂದು ಆಯುರ್ವೇದ ವೈದ್ಯರ ಬಳಿ ಪರಿಕ್ಷೀಸಿಕೊಳ್ಳಿ. ಏಕೆಂದರೆ ದೇಹದಲ್ಲಿ ಪಿತ್ತ ಅಸಮತೋಲನವಾದರೆ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯದಲ್ಲೂ ಏರು-ಪೇರು ಉಂಟಾಗುತ್ತದೆ. ಪಿತ್ತ ನಮ್ಮ ಭಾವನೆಗಳನ್ನು ನಿಯಂತ್ರಿಸುವ ಒಂದು ಎನರ್ಜಿಯಾಗಿದೆ.
ಪಿತ್ತ ಏನೆಲ್ಲಾ ಮಾಡುತ್ತೆ ಗೊತ್ತಾ?
ದೇಹದಲ್ಲಿ ಪಿತ್ತದ ಅಂಶ ಸಮತೋಲನದಲ್ಲಿದ್ದರೆ, ನೀವು ಸಂತೋಷವಾಗಿರುತ್ತೀರಿ. ಧೈರ್ಯ, ಬುದ್ಧಿವಂತಿಕೆ, ಸದಾ ಸ್ಫೂರ್ತಿ ತುಂಬಿದವರಾಗಿರುತ್ತೀರಿ. ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟ ಬಂದರೂ ಜಯಿಸುವಿರಿ.
ಒಂದು ವೇಳೆ ಪಿತ್ತ ಅಸಮತೋಲನವಾಗಿದ್ದರೆ ಸಣ್ಣ ಪುಟ್ಟ ವಿಷಯಕ್ಕೂ ಕಿರಿಕಿರಿ, ಭಾವನಾತ್ಮಕ ಒತ್ತಡ, ಎಲ್ಲರ ಮೇಲೂ ಕೋಪ, ಜೀವನದ ಬಗ್ಗೆಯೇ ಸಿಟ್ಟು ಬರುವಂತಾಗುತ್ತದೆ.
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಇದು ಜ್ವರ, ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.
ಧೂಮಪಾನ, ಮದ್ಯಪಾನವೂ ಪಿತ್ತದ ಅಸಮತೋಲನಕ್ಕೆ ಕಾರಣವಾಗುತ್ತದೆ. ಯೋಗ, ಧ್ಯಾನ, ವ್ಯಾಯಮದಿಂದ ಪಿತ್ತ ದೋಷವನ್ನು ಸರಿ ಮಾಡಬಹುದು.
ಪಿತ್ತದ ಸಮತೋಲನ ಕಾಯ್ದುಕೊಳ್ಳುವ ಆಹಾರವನ್ನು ಸೇವಿಸಬೇಕು. ಕಲಂಗಡಿ ಹಣ್ಣು, ಹೆಸರುಕಾಳು, ಸಿಹಿ ಸೇಬು, ಅಂಜೂರ, ತೆಂಗಿನಕಾಯಿ, ನೇರಳೇ ಬಣ್ಣದ ಎಲೆಕೋಸು, ಸೌತೆಕಾಯಿ, ಬೆಂಡೆಕಾಯಿ, ಆಲೂಗೆಡ್ಡೆ ಮತ್ತು ಬೀನ್ಸ್ ಇವು ಪ್ರಯೋಜನಕಾರಿ. ಹುಳಿ ಹಣ್ಣುಗಳನ್ನು ಸ್ವಲ್ಪ ನಿಯಂತ್ರಿಸಿ.