ಬೆಳಿಗ್ಗೆ 5 ಗಂಟೆಗೆ ಏಳುವ ಮಹಿಳೆಯ ದಿನಚರಿ ಅಲ್ಲಿಂದಲೇ ಆರಂಭವಾಗುತ್ತದೆ. ಬೆಳಗಿನ ತಿಂಡಿ, ಮಕ್ಕಳ ಲಾಲನೆ, ಪಾಲನೆ ಎಂದು ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಬೆಳಗಿನಿಂದ ಅಷ್ಟು ಹೊತ್ತು ಏನನ್ನು ತಿನ್ನದ ಕಾರಣಕ್ಕೆ ಮಹಿಳೆಯರಿಗೆ ಸಹಜವಾಗಿಯೇ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೆಚ್ಚಿನ ಮಹಿಳೆಯರು ಬೆಳಗ್ಗೆದ್ದು ತಿಂಡಿ ತಿನ್ನಲು ನಮಗೆ ಪುರುಸೊತ್ತಿಲ್ಲ ಎಂದು ಹೇಳುವುದನ್ನು ನೀವು ಕೇಳಿರಬಹುದು ಆದರೆ ಇವರ ಸಮಸ್ಯೆಗೆ ಪರಿಹಾರವೇನು?
ಬೆಳಗ್ಗಿನ ಗಡಿಬಿಡಿಯಲ್ಲಿ ತಿಂಡಿ ತಿನ್ನಲು ಸಮಯ ಸಿಗದಿದ್ದರೂ ಒಂದು ಲೋಟ ಚಹಾ ಅಥವಾ ಕಾಫಿ ಕುಡಿದಿರಾ ಅಲ್ಲವೇ? ಅದರೊಂದಿಗೆ ಎರಡು ಬಿಸ್ಕೆಟ್ ಇಲ್ಲವೇ ರಸ್ಕ್ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ದೀರ್ಘಕಾಲ ನೀವು ಖಾಲಿ ಹೊಟ್ಟೆಯಲ್ಲಿ ಇರದಂತೆ ನೋಡಿಕೊಳ್ಳುತ್ತದೆ. ಮಾತ್ರವಲ್ಲ ನಿಮಗೆ ಕೆಲಸ ಮಾಡಲು ಶಕ್ತಿಯನ್ನು ನೀಡುತ್ತದೆ.
ಬ್ರೆಡ್, ಬಟರ್ ನಿಮಗೆ ಇದೇ ಪ್ರಯೋಜನವನ್ನು ನೀಡುತ್ತದೆ. ಆದರೆ ರಸ್ಕ್ , ಬ್ರೆಡ್ ಇವುಗಳಲ್ಲಿ ಹೆಚ್ಚಿನವು ಮೈದಾದಿಂದ ತಯಾರಿಸಿದ ಕಾರಣಕ್ಕೆ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಚಹಾ ಅಥವಾ ಕಾಫಿಯೊಂದಿಗೆ 2 ಬಿಸ್ಕೆಟ್ ತಿಂದರೆ ಸಾಕು.