ಕರಿದ ತಿನಿಸುಗಳು ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಪ್ರವೃತ್ತಿ ಭಾರತದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳನ್ನು ನಾವು ಹಲವು ಬಾರಿ ಎದುರಿಸಿಸುತ್ತೇವೆ. ಅಷ್ಟೇ ಅಲ್ಲ ಹೊಟ್ಟೆಯಿಂದ ಕೆಲವೊಮ್ಮೆ ಗುರ್ ಗುರ್ ಎಂಬ ಶಬ್ಧ ಬರುತ್ತದೆ. ಈ ರೀತಿ ಆದಾಗ ಅಲರ್ಟ್ ಆಗಬೇಕು, ಏಕೆಂದರೆ ಇದು ಗಂಭೀರ ಕಾಯಿಲೆಯ ಲಕ್ಷಣವೂ ಆಗಿರಬಹುದು.
ಹೊಟ್ಟೆಯಿಂದ ಶಬ್ಧ ಏಕೆ ಬರುತ್ತದೆ?
ಹೊಟ್ಟೆಯಿಂದ ಬರುವ ಈ ಶಬ್ಧವನ್ನು ಗ್ರೌಲಿಂಗ್ ಎಂದು ಕರೆಯಲಾಗುತ್ತದೆ. ಆಹಾರವು ಜೀರ್ಣವಾಗುವ ಸಂದರ್ಧದಲ್ಲಿ ಈ ಶಬ್ಧವು ಹೊಟ್ಟೆ ಮತ್ತು ಕರುಳಿನ ನಡುವೆ ಬರುತ್ತದೆ. ಅಂತಹ ಶಬ್ಧವು ಒಂದೆರಡು ಬಾರಿ ಕೇಳಿದರೆ ಗಾಬರಿಯಾಗುವ ಅಗತ್ಯವಿಲ್ಲ. ಆದರೆ ಇದು ಮತ್ತೆ ಮತ್ತೆ ಸಂಭವಿಸಿದರೆ ವೈದ್ಯರನ್ನು ಸಂಪರ್ಕಿಸಬೇಕು.
ಜೀರ್ಣಕ್ರಿಯೆಗಾಗಿ ಆಹಾರವು ನಮ್ಮ ಸಣ್ಣ ಕರುಳನ್ನು ತಲುಪಿದಾಗ, ದೇಹವು ಆಹಾರವನ್ನು ಒಡೆಯಲು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಹೊಟ್ಟೆ ಹಸಿದಾಗ ಈ ರೀತಿಯ ಗ್ರೌಲಿಂಗ್ ಶಬ್ಧ ಕೇಳಿಸುತ್ತದೆ.
ಪದೇ ಪದೇ ಈ ರೀತಿ ಆಗುತ್ತಿದ್ದರೆ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಸಮಯಕ್ಕೆ ಸರಿಯಾಗಿ ಇದನ್ನು ಪತ್ತೆ ಮಾಡಬೇಕು. ಜೀರ್ಣಕ್ರಿಯೆಯನ್ನು ಹೊರತುಪಡಿಸಿ ಬೇರೆ ಯಾವುದಾದರೂ ಕಾರಣದಿಂದ ಇದು ಸಂಭವಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಹೊಟ್ಟೆಯಲ್ಲಿ ಗ್ರೌಲಿಂಗ್ ಶಬ್ಧ ಪದೇ ಪದೇ ಕೇಳಿಬರುತ್ತಿದ್ದರೆ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಕಡಿಮೆ ಅಂತರದಲ್ಲಿ ಲಘು ಆಹಾರವನ್ನು ಸೇವಿಸಬೇಕು. ದಿನಕ್ಕೆ ಎರಡು ಬಾರಿ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು. ನಿತ್ಯ ಹೀಗೆ ಮಾಡುವುದರಿಂದ ಹೊಟ್ಟೆಯಿಂದ ಬರುವ ಸದ್ದು ನಿಲ್ಲುತ್ತದೆ.