ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಯೋಗ, ಜಿಮ್, ಡಯಟ್ ಹೀಗೆ ಸಾಕಷ್ಟು ಪ್ರಯತ್ನ ಮಾಡಿದ್ರೂ ಅನೇಕರ ತೂಕ ಇಳಿಯುವುದಿಲ್ಲ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಈ ಪ್ರಯೋಗಗಳನ್ನು ಮಾಡಿ. ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಿ.
ಕೆಲಸದ ಒತ್ತಡದಲ್ಲಿ ಅನೇಕರು ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುವುದಿಲ್ಲ. ಅಡುಗೆ ಮಾಡುವುದ್ರಿಂದಲೂ ತೂಕ ಇಳಿಯುತ್ತೆ. ಇಂದಿನಿಂದ ನಿಮ್ಮ ಅಡುಗೆಯನ್ನು ನೀವೇ ಮಾಡಿಕೊಳ್ಳಿ. ಅಡುಗೆ ಮಾಡುವ ವೇಳೆ ಸುಮಾರು 100 ಕ್ಯಾಲೋರಿ ಬರ್ನ್ ಆಗುತ್ತದೆ.
ಹಿಟ್ಟು ಹದ ಮಾಡುವುದು ಸುಲಭದ ಕೆಲಸವಲ್ಲ. ಚಪಾತಿ, ರೊಟ್ಟಿ ಹಿಟ್ಟುಗಳನ್ನು ಹದ ಮಾಡಲು ದೇಹಕ್ಕೆ ಸ್ವಲ್ಪ ತೊಂದರೆ ನೀಡಲೇಬೇಕು. ಇದ್ರಿಂದ 50 ಕ್ಯಾಲೋರಿ ಬರ್ನ್ ಆಗುತ್ತದೆ ಎಂಬುದು ನೆನಪಿರಲಿ.
ನೀವು ಆಹಾರ ಸೇವನೆ ಮಾಡಿದ ಹಾಗೂ ಅಡುಗೆ ಮಾಡಿದ ಪಾತ್ರೆಗಳನ್ನು ನೀವೇ ತೊಳೆಯಲು ಶುರು ಮಾಡಿ. ಪಾತ್ರೆ ತೊಳೆಯುವುದು ಕೂಡ ಒಂದು ವ್ಯಾಯಾಮವಿದ್ದಂತೆ. ಇದರಿಂದ 125 ಕ್ಯಾಲೋರಿ ಬರ್ನ್ ಆಗುತ್ತದೆ.
ಮನೆ ಸ್ವಚ್ಛಗೊಳಿಸುವುದು ಒಂದು ರೀತಿಯ ವ್ಯಾಯಾಮ. ಮನೆಯ ಕಸ ತೆಗೆಯುವುದು. ಕ್ಲೀನ್ ಮಾಡುವುದ್ರಿಂದ ಕೈ, ಕಾಲಿಗ ವ್ಯಾಯಾಮವಾಗುತ್ತದೆ. 20 ನಿಮಿಷ ನೀವು ಈ ಕೆಲಸ ಮಾಡಿದ್ರೆ ಸುಮಾರು 150 ಕ್ಯಾಲೋರಿ ಬರ್ನ್ ಆಗುತ್ತದೆ.
ಬಟ್ಟೆ ತೊಳೆಯಲು ಈಗ ಮಶಿನ್ ಬಂದಿದೆ. ಬಹುತೇಕರು ಕೈನಲ್ಲಿ ಬಟ್ಟೆ ತೊಳೆಯುವುದಿಲ್ಲ. ಆದ್ರೆ ಬಟ್ಟೆ ತೊಳೆಯುವುದ್ರಿಂದ 130 ಕ್ಯಾಲೋರಿ ಬರ್ನ್ ಆಗುತ್ತದೆ. ಸಮಯ ಸಿಕ್ಕಾಗ ನಿಮ್ಮ ಬಟ್ಟೆಯನ್ನು ನೀವೇ ಸ್ವಚ್ಛಗೊಳಿಸಿಕೊಳ್ಳಿ.