ಪಾರ್ಟಿ ಫಂಕ್ಷನ್ ಗಳಲ್ಲಿ ಊಟ ಮಾಡಿದ ಬಳಿಕ ದೇಹದಲ್ಲಿ ಆಹಾರವು ಜೀರ್ಣವಾಗದೆ ಇದ್ದಾಗ ಹೊಟ್ಟೆನೋವು, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವ ಮನೆಮದ್ದುಗಳ ಬಗ್ಗೆ ತಿಳಿಯೋಣ.
ಬಿಸಿ ನೀರಿನ ಬ್ಯಾಗ್ ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ ಸ್ವಲ್ಪ ನಿವಾರಣೆಯಾಗುತ್ತದೆ.
ಗ್ರೀನ್ ಟೀ ಅಥವಾ ಪುದೀನಾ ಟೀ ಕುಡಿಯುವುದರಿಂದಲೂ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಪುದೀನಾವನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ಹೊಟ್ಟೆ ನೋವು ಮತ್ತು ಗ್ಯಾಸ್ ಸಮಸ್ಯೆ ಮಾಯವಾಗುತ್ತದೆ. ಪುದೀನಾ ಎಲೆಯ ಚಟ್ನಿ ಮಾಡಿ ಸೇವಿಸಿದರೆ ಜೀರ್ಣಶಕ್ತಿ ವೃದ್ಧಿಸುತ್ತದೆ.
ಹೊಟ್ಟೆ ಉಬ್ಬರವಾದಾಗ ಸ್ವಲ್ಪ ಸಮಯ ವಾಕ್ ಮಾಡಿದರೆ ದೇಹಕ್ಕೆ ರಿಲೀಫ್ ಸಿಗುತ್ತದೆ. ಶುಂಠಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರಲ್ಲಿ ಸ್ವಲ್ಪ ನಿಂಬೆ ರಸ ಮತ್ತು ಜೇನುತುಪ್ಪವನ್ನು ಹಾಕಿ ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.