
ಕೆಲವರು ತೂಕ ಇಳಿಸಿಕೊಳ್ಳಲು ಉಪವಾಸದಿಂದ ಇರುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಈ ವಿಧಾನ ನಿಮ್ಮನ್ನು ದುರ್ಬಲಗೊಳಿಸುವುದಲ್ಲದೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ತೂಕ ಇಳಿಸಿಕೊಳ್ಳಲು ಹಸಿವಿನಿಂದ ಇರುವ ಮಾರ್ಗವನ್ನು ಅನುಸರಿಸಿದರೆ ಯಾವ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯೋಣ.
1.ಹಸಿವಿನಿಂದ ಇದ್ದರೆ ನಿಮಗೆ ಪಿತ್ತಗಲ್ಲುಗಳಂತಹ ರೋಗಗಳು ಕಾಡುತ್ತದೆ.
2.ಆಹಾರ ಸೇವಿಸದೆ ಇದ್ದಾಗ ನೀರು ಕುಡಿಯುವ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದೇಹ ನಿರ್ಜಲೀಕರಣವಾಗಿ ಮೂತ್ರ ವಿಸರ್ಜನೆ ಕಡಿಮೆಯಾಗಿ ಗಂಭೀರ ಕಾಯಿಲೆಗೆ ತುತ್ತಾಗುತ್ತೀರಿ.
3.ಹಸಿವಿನಿಂದ ದೇಹದ ಶಕ್ತಿ ಕಡಿಮೆಯಾಗಿ ಮುಖ ಕಳೆಗುಂದುತ್ತದೆ. ಚರ್ಮ ಸುಕ್ಕುಗಟ್ಟುತ್ತದೆ.
4.ಆಹಾರ ಜೀರ್ಣವಾಗಲು ಲಿವರ್ ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಆಹಾರ ಸೇವಿಸದಿದ್ದರೆ ಹೊಟ್ಟೆಯಲ್ಲಿ ಅನಿಲ ತುಂಬಿ ಅದು ಲಿವರ್ ಊತಕ್ಕೆ ಕಾರಣವಾಗುತ್ತದೆ.