alex Certify ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ

ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು ಬಾರಿ ಇಯರ್​​ಫೋನ್​ಗಳನ್ನ ಕಿವಿಗೆ ಸಿಕ್ಕಿಸಿಕೊಂಡೇ ತಿರುಗ್ತಾ ಇದ್ದಾರೆ.

ಬಹುಶಃ ನಿಮಗೂ ಕೂಡ ಈ ಅಭ್ಯಾಸ ಇದ್ದಿರಬಹುದು. ಒಂದು ವೇಳೆ ನೀವು ಕೂಡ ಇಯರ್ ​ಫೋನ್​ಗಳನ್ನ ಸಿಕ್ಕಾಪಟ್ಟೆ ಬಳಕೆ ಮಾಡುವವರ ಪೈಕಿಗೆ ಸೇರಿದ್ದರೆ ನೀವು ಈ ಸ್ಟೋರಿಯನ್ನ ಓದಲೇಬೇಕು. ಯಾಕಂದರೆ ಇಯರ್ ​ಫೋನ್​​ಗಳನ್ನ ಅತಿ ಹೆಚ್ಚು ಸಮಯ ಬಳಕೆ ಮಾಡೋದ್ರಿಂದ ನಿಮ್ಮ ಕಿವಿಯ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿದೆ. ಇದು ನಿಮ್ಮನ್ನ ಶಾಶ್ವತ ಕಿವುಡರನ್ನಾಗಿ ಮಾಡಲೂಬಹುದು.

ಸೋಂಕು ತಗಲುವ ಸಾಧ್ಯತೆ:

ಬಹಳ ಸಮಯದವರೆಗೆ ಇಯರ್ ​ಫೋನ್​ಗಳನ್ನ ಕಿವಿಗೆ ಹಾಕಿಕೊಂಡೇ ಇರೋದ್ರಿಂದ ಕಿವಿಯಲ್ಲಿ ಸೋಂಕು ಉಂಟಾಗಬಹುದು. ಹೀಗಾಗಿ ಯಾರ ಜೊತೆಯಾದರು ನೀವು ಇಯರ್ ​ಫೋನ್​ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದರೆ ಪ್ರತಿ ಬಾರಿ ಇಯರ್​ ಫೋನ್ ಬಡ್​ಗೆ ಸ್ಯಾನಿಟೈಸರ್ ಹಾಕಲು ಮರೆಯದಿರಿ.

ಕಿವುಡತನ ಉಂಟಾಗುವ ಸಾಧ್ಯತೆ:

ಇಯರ್​​ ಫೋನ್​ ಗಳನ್ನ ದಿನವಿಡಿ ಬಳಕೆ ಮಾಡೋದ್ರಿಂದ ಶ್ರವಣ ಸಾಮರ್ಥ್ಯ 40 ರಿಂದ 50 ಡೆಸಿಬಲ್​ವರೆಗೆ ಕಡಿಮೆಯಾಗಬಹುದು. ಕಿವಿಯ ಪರದೆ ವೈಬ್ರೇಟ್​ ಆಗಲು ಶುರುವಾಗುತ್ತೆ. ದೂರದ ಶಬ್ದಗಳು ನಿಮಗೆ ಕೇಳದೆಯೂ ಇರಬಹುದು. ಅಲ್ಲದೇ ಶಾಶ್ವತ ಕಿವುಡುತನ ಕೂಡ ಉಂಟಾಗಬಹುದು.

ಮಾನಸಿಕ ಸಮಸ್ಯೆ:

ದೊಡ್ಡ ಧ್ವನಿಯಲ್ಲಿ ಹಾಡುಗಳನ್ನ ಕೇಳೋದ್ರಿಂದ ಮಾನಸಿಕ ಸಮಸ್ಯೆ, ಹೃದ್ರೋಗ ಹಾಗೂ ಕ್ಯಾನ್ಸರ್​​ ಉಂಟಾಗುವ ಸಾಧ್ಯತೆ ಇದೆ.

ಮೆದುಳಿನ ಮೇಲೆ ದುಷ್ಪರಿಣಾಮ: ದೀರ್ಘಕಾಲದವರೆಗೆ ಇಯರ್​ ಫೋನ್ ​ಗಳನ್ನ ಬಳಕೆ ಮಾಡೋದ್ರಿಂದ ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ಈ ಎಲ್ಲಾ ಗಂಭೀರ ಪರಿಣಾಮಗಳಿಂದ ಪಾರಾಗಲು ಇಯರ್ ​ಫೋನ್​ಗಳ ಬಳಕೆ ಆದಷ್ಟು ಕಡಿಮೆ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...