alex Certify ಮೀರತ್​ ಶಾಪ್ ​ನಲ್ಲಿದೆ 8 ಕೆಜಿ ಸಮೋಸ; ತಿಂದವರಿಗೆ ಸಿಗುತ್ತೆ 51 ಸಾವಿರ ರೂ. ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀರತ್​ ಶಾಪ್ ​ನಲ್ಲಿದೆ 8 ಕೆಜಿ ಸಮೋಸ; ತಿಂದವರಿಗೆ ಸಿಗುತ್ತೆ 51 ಸಾವಿರ ರೂ. ಬಹುಮಾನ

ಬಾಣಸಿಗರು ಆಗಾಗ್ಗೆ ಸಾಹಸಗಳನ್ನು ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿರುವ ಕೌಶಲ್​ ಸ್ವೀಟ್ಸ್​ನಲ್ಲಿ ದೈತ್ಯ ಗಾತ್ರದ ಸಮೋಸಾ ತಯಾರಿಸಿದ್ದಾರೆ. ಈ ಸಮೋಸಾ 8 ಕೆ.ಜಿ. ತೂಗಲಿದೆ. ಇದನ್ನು ಸಾಮಾನ್ಯರು ತಿನ್ನುವುದು ಕಷ್ಟವೇ, ಇದನ್ನು ತಿನ್ನಲು ಬಾಹುಬಲಿಯಂತವರೇ ಬರಬೇಕೇನೋ ಎಂಬಂತಿದೆ.

ಯಾರಾದರೂ ಇದನ್ನು 30 ನಿಮಿಷಗಳಲ್ಲಿ ಸ್ವಂತವಾಗಿ ಮುಗಿಸಿದರೆ 51,000 ರೂ. ಬಹುಮಾನವನ್ನೂ ಗೆಲ್ಲಬಹುದಾದ ಸವಾಲು ಹಾಕಲಾಗಿದೆ. ವರದಿಗಳ ಪ್ರಕಾರ, ಈ ಸಮೋಸಾವನ್ನು ತಿನ್ನಲು ಒಟ್ಟು 30 ಜನರು ಬೇಕಾಗುತ್ತಾರೆ, ಇದನ್ನು ತಯಾರಿಸಲು 1100 ರೂ. ವೆಚ್ಚವಾಗಿದೆ. ತಯಾರಿಸಲು 1 ರಿಂದ ಒಂದೂವರೆ ಗಂಟೆ ತೆಗೆದುಕೊಳ್ಳಲಾಯಿತೆಂದು ಕೌಶಲ್​ ಸ್ವೀಟ್ಸ್​ ಮಾಲೀಕ ಶುಭಂ ಕೌಶಲ್​ ಹೇಳಿಕೊಂಡಿದ್ದಾರೆ.

ತಮ್ಮ ಔಟ್​ಲೆಟ್​ ಗ್ರಾಹಕರ ಮುಂದೆ ಈ ಜನಪ್ರಿಯ ಖಾದ್ಯವನ್ನು ಪ್ರಸ್ತುತಪಡಿಸುತ್ತಿರುವುದಕ್ಕೆ ಅವರು ಹೆಮ್ಮೆಪಡುತ್ತಾರೆ. ಇದಕ್ಕೂ ಮೊದಲು, ಈ ಮಳಿಗೆಯು 4 ಕೆ.ಜಿ. ಸಮೋಸಾವನ್ನು ಸಹ ತಯಾರಿಸಲಾಗಿತ್ತು. ಇದೀಗ ಬಾಹುಬಲಿ ಸಮೋಸಾ ತಯಾರಿಸುವುದರೊಂದಿಗೆ ಕೌಶಲ್​ ಸ್ವೀಟ್ಸ್​ ಹೊಸ ದಾಖಲೆ ನಿಮಿರ್ಸಿದೆ. ಇವರು ಇಷ್ಟಕ್ಕೆ ನಿಲ್ಲಿಸುವ ಯೋಚನೆಯಲ್ಲಿಲ್ಲ, 10 ಕೆಜಿ ಸಮೋಸಾ ಮಾಡಲು ಯೋಜಿಸುತ್ತಿದ್ದಾರೆ.

ಈ ಬಾಹುಬಲಿ ಸಮೋಸಾದಲ್ಲಿ ಬಳಸಲಾದ ಪದಾರ್ಥಗಳ ಬಗ್ಗೆ ವಿವರಣೆ ನೀಡಿರುವ ಅವರು ಆಲೂಗಡ್ಡೆ, ಬಟಾಣಿ, ಕ್ಯಾಬೇಜ್‌,​ ಚೀಸ್​ ಮತ್ತು ಒಣ ಹಣ್ಣುಗಳನ್ನು ಇದು ಒಳಗೊಂಡಿದೆ. 4 ಕೆ.ಜಿ ಸಮೋಸಾ ತಯಾರಿಸಲು 600 ರೂ., 10 ಕೆಜಿ ಸಮೋಸಕ್ಕೆ 1300 ರೂ. ಬೇಕಾಗಬಹುದೆಂದು ಅಂದಾಜಿದ್ದಾರೆ.

ಬಾಹುಬಲಿ ಸಮೋಸಾ ತಯಾರಿಸಿದ ನಂತರ ಶುಭಂ ಅಂಗಡಿ ಜನಪ್ರಿಯತೆ ಪಡೆದುಕೊಂಡಿದೆ. ಅನೇಕ ಆಹಾರ ಬ್ಲಾಗರ್​ಗಳು ಅಂಗಡಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ರೀಲ್​ಗಳನ್ನು ತಯಾರಿಸುತ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...