ಅನೇಕರಿಗೆ ಪನ್ನೀರ್ ಬಹಳ ಇಷ್ಟ. ಸಸ್ಯಹಾರಿಗಳು ಹೆಚ್ಚಾಗಿ ಪನ್ನೀರ್ ಬಳಕೆ ಮಾಡ್ತಾರೆ. ಪ್ರೋಟಿನ್ ಹೆಚ್ಚಿರುವ ಪನ್ನೀರ್ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕರ. ತಜ್ಞರ ಪ್ರಕಾರ, ಹೆಚ್ಚು ಪನ್ನೀರ್ ಸೇವನೆ ಮಾಡುವುದ್ರಿಂದ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ.
ಅತಿಯಾದ ಪನ್ನೀರ್ ಸೇವನೆಯಿಂದ ಅತಿಸಾರ ಸಮಸ್ಯೆ ಕಾಡುವ ಸಾಧ್ಯತೆಯಿದೆ. ದೇಹದಲ್ಲಿ ಪ್ರೋಟಿನ್ ಮಟ್ಟ ಹೆಚ್ಚಾದರೆ ಅತಿಸಾರ ಕಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಪನ್ನೀರ್ ಸೇವನೆ ಮಾಡಬೇಕಾಗುತ್ತದೆ.
ಅತಿಸಾರ ಮಾತ್ರವಲ್ಲ, ಪನ್ನೀರ್ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದ್ರೆ ಹೃದಯ ಖಾಯಿಲೆ ಅಪಾಯ ಹೆಚ್ಚಾಗುತ್ತದೆ. ಪನ್ನೀರ್ ಅತಿಯಾದ ಸೇವನೆ ತೂಕ ಇಳಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಮಲಬದ್ಧತೆ, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆ ಇದ್ದವರು ಹೆಚ್ಚು ಪನೀರ್ ಸೇವನೆ ಮಾಡಬಾರದು. ಇದ್ರಿಂದ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ದಿನ ಮಾತ್ರ ಪನ್ನೀರ್ ಸೇವನೆ ಮಾಡಿ.
ವಾರದಲ್ಲಿ ನಾಲ್ಕೈದು ದಿನ ಪನ್ನೀರ್ ಸೇವನೆ ಮಾಡುವುದ್ರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಈಗಾಗಲೇ ರಕ್ತದೊತ್ತಡ ಸಮಸ್ಯೆಯಿರುವವರು ಪನ್ನೀರ್ ನಿಂದ ದೂರವಿರುವುದು ಒಳ್ಳೆಯದು.