ವಿಶ್ವದಲ್ಲಿ ಅನೇಕ ರೀತಿಯ ಗಂಭೀರ ಕಾಯಿಲೆಗಳಿವೆ. ಕೆಲವು ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿಲ್ಲ. ಮತ್ತೆ ಕೆಲ ಕಾಯಿಲೆಗಳ ಚಿಕಿತ್ಸೆ ಖರ್ಚು ದುಬಾರಿ. ಅಪರೂಪದ ಕಾಯಿಲೆಯನ್ನು ಗುಣಪಡಿಸಲು ಬಳಸುವ ದುಬಾರಿ ಔಷಧಿಯೊಂದಕ್ಕೆ ಬ್ರಿಟನ್ ರಾಷ್ಟ್ರೀಯ ಆರೋಗ್ಯ ಸೇವೆ ಅನುಮತಿ ನೀಡಿದೆ. Zolgensma ಹೆಸರಿನ ಔಷಧಿಯ ಒಂದು ಡೋಸ್‌ಗೆ 18 ಕೋಟಿ ರೂಪಾಯಿ ವೆಚ್ಛವಾಗುತ್ತದೆ.
ಈ ಮೊದಲು ಅಮೆರಿಕಾ Zolgensma ಔಷಧಿ ಬಳಕೆಗೆ ಅನುಮೋದನೆ ನೀಡಿತ್ತು. ಮಕ್ಕಳಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್ಎಂಎಎಸ್) ಕಾಯಿಲೆಗೆ ಇದನ್ನು ಬಳಸಲಾಗುತ್ತದೆ.
ಭಾರತದಿಂದ ಪಾಕಿಸ್ತಾನಕ್ಕೆ ಉಚಿತ ಲಸಿಕೆ
ಎಸ್ಎಂಎಎಸ್ ಗಂಭೀರ ಕಾಯಿಲೆಯಾಗಿದೆ. ಎಸ್‌ಎಂಎ ಬಹಳ ಅಪರೂಪದ ಕಾಯಿಲೆಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಎದೆಯ ಸ್ನಾಯುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಉಸಿರಾಡಲು ತೊಂದರೆಯಾಗುತ್ತದೆ.
ಯುಕೆಯಲ್ಲಿ ಈ ಸಮಸ್ಯೆ ಹೆಚ್ಚಿದೆ. ಪ್ರತಿ ವರ್ಷ ಇಂಗ್ಲೆಂಡ್‌ನಲ್ಲಿ ಸುಮಾರು 80 ಮಕ್ಕಳು ಈ ಗಂಭೀರ ಕಾಯಿಲೆಗೆ ಒಳಗಾಗ್ತಿದ್ದಾರೆ. ಸಮಯಕ್ಕೆ ಚಿಕಿತ್ಸೆ ಸಿಗದೆ ಹೋದಲ್ಲಿ ಸಾವು ನಿಶ್ಚಿತ. Zolgensma ಔಷಧಿಯನ್ನು ಪ್ರಸಿದ್ಧ ಔಷಧಿ ಕಂಪನಿ ನೊವಾರ್ಟಿಸ್ ತಯಾರಿಸಿದೆ.