ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು ಇವೆ. ಸ್ಯಾಂಡ್ ವಿಚ್, ಹಾಗೂ ಸಲಾಡ್ ಮಾಡುವಾಗ ಇದನ್ನು ಬಳಸಿದರೆ ಮಾತ್ರ ರುಚಿ ಹೆಚ್ಚಾಗುತ್ತದೆ. ಗರ್ಭಿಣಿಯರು ಸೌತೆಕಾಯಿಯನ್ನು ಬಳಸಿದರೆ ಸಿಗುವ ಲಾಭವೇನು ಇದರಿಂದ ಅವರ ದೇಹದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿಯೋಣ.
ಸೌತೆಕಾಯಿಯಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದೆ. ಕೊಬ್ಬಿನಾಂಶವಿಲ್ಲ. ವಿಟಮಿನ್ ಕೆ, ಮೆಗ್ನೇಷಿಯಂ, ಪೋಟ್ಯಾಷಿಯಂ ಇದೆ. ಹಾಗೇ 96% ನಷ್ಟು ನೀರಿನಿಂದ ಕೂಡಿದೆ.
ಇನ್ನು ಗರ್ಭಿಣಿಯರು ಇದನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕು ಅನಿಸುತ್ತದೆ. ಹಾಗೇ ಕೆಲವರಿಗೆ ಇದು ಅಲರ್ಜಿ ಆಗುವ ಸಾಧ್ಯತೆ ಕೂಡ ಇದೆ.
ಇನ್ನು ಹಿತಮಿತವಾಗಿ ಇದನ್ನು ಸೇವಿಸಿದರೆ ದೇಹ ತಂಪಾಗಿರುತ್ತದೆ. ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ.
ಇನ್ನು ಜೀರ್ಣಕ್ರೀಯೆಯನ್ನು ಸರಾಗವಾಗಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ. ಹಲ್ಲಿನ ದವಡೆಯ ಸಮಸ್ಯೆಯನ್ನು ನಿವಾರಿಸುತ್ತದೆ.