ಕೆಲವರಿಗೆ ಕಾಲಿನಲ್ಲಿ ಆಣಿ ಕಾಣಿಸಿಕೊಳ್ಳುತ್ತದೆ. ಪಾದಗಳಲ್ಲಿ ಅಕ್ಕ ಪಕ್ಕ ಮತ್ತು ಹಿಂಭಾಗ ಮತ್ತು ಮುಂಭಾಗದಲ್ಲಿ ಚರ್ಮದ ಒತ್ತಡದಿಂದ ಅಥವಾ ವಿಪರೀತ ಬಿಸಿಯಿಂದ ಹುಟ್ಟುವ ಇದು ಗಟ್ಟಿಯಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮುಟ್ಟಿದರೆ ನೋವಾಗುತ್ತದೆ. ಚಪ್ಪಲಿ, ಬೂಟುಗಳನ್ನು ಧರಿಸಲು ಕಷ್ಟವಾಗುತ್ತದೆ.
ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಹೀಗೆ ಅನೇಕ ರೀತಿಯಲ್ಲಿ ತೊಂದರೆ ಕೊಡುವ ಆಣಿಗೆ ಕೆಲವು ಮನೆ ಮದ್ದುಗಳು ಇಲ್ಲಿವೆ.
ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಕಾಲಿನ ಪಾದದಲ್ಲಿ ಆಗಿರುವ ಆಣಿಯ ಮೇಲೆ ಇಟ್ಟು ಬಟ್ಟೆಯ ಮುಖಾಂತರ ಬ್ಯಾಂಡೇಜ್ ರೀತಿಯಲ್ಲಿ ಕಟ್ಟಿ. ಮೂರು ದಿನಗಳ ಕಾಲ ಈ ರೀತಿ ಮಾಡಿದರೆ ನೋವು ಕಡಿಮೆಯಾಗುತ್ತದೆ.
ಎಕ್ಕದ ಗಿಡದ ಎಲೆಗಳಿಂದ ಬರುವ ಹಾಲಿಗೆ ಹರಳೆಣ್ಣೆ ಬೆರೆಸಿ ಮಿಕ್ಸ್ ಮಾಡಿ. ನಂತರ ಹತ್ತಿಯ ಬಟ್ಟೆಯಿಂದ ಅದ್ದಿ ಆಣಿ ಆಗಿರುವ ಜಾಗಕ್ಕೆ ಹಚ್ಚಿ. ಈ ಎಕ್ಕದ ಗಿಡದ ಹಾಲು ಮತ್ತು ಹರಳೆಣ್ಣೆ ಕಾಲಿನ ಆಣಿಗಳನ್ನು ಗುಣಪಡಿಸುವಲ್ಲಿ ಪ್ರಮುಖವಾಗಿ ಸಹಾಯ ಮಾಡುತ್ತದೆ.
ಎಲೆ ಅಡಿಕೆಗೆ ಬಳಸುವ ಸುಣ್ಣಕ್ಕೆ ಚಕ್ಕೆ ಪುಡಿಯನ್ನು ಬೆರೆಸಿ ಮಿಕ್ಸ್ ಮಾಡಿ ಆಣಿ ಆಗಿರುವ ಜಾಗಕ್ಕೆ ಹಚ್ಚಿಕೊಳ್ಳುವುದರಿಂದ ಬೇಗನೆ ನಿವಾರಣೆ ಆಗುತ್ತದೆ.