ಹೊಸ ಚಪ್ಪಲಿ ಕಾಲಿನ ಅಂದ ಹೆಚ್ಚಿಸುತ್ತೆ ನಿಜ. ಆದ್ರೆ ಹೊಸ ಚಪ್ಪಲಿ, ಬೂಟ್ ನೀಡುವ ನೋವು ಅನುಭವಿಸಿದವರಿಗೆ ಗೊತ್ತು. ಬಿಗಿಯಾದ ಚಪ್ಪಲಿ, ಬೂಟ್ ಗಳು ಪಾದವನ್ನು ತಿಕ್ಕಲು ಶುರು ಮಾಡುತ್ತವೆ. ಇದ್ರಿಂದ ಕಾಲಿಗೆ ಗಾಯವಾಗುತ್ತದೆ. ಕೆಲವರಿಗೆ ಗುಳ್ಳೆಯಾಗುತ್ತದೆ. ಹೊಸ ಚಪ್ಪಲಿ ನೀಡುವ ಯಮಯಾತನೆಯನ್ನು ಸುಲಭ ಟಿಪ್ಸ್ ಮೂಲಕ ಕಡಿಮೆ ಮಾಡಿಕೊಳ್ಳಬಹುದು.
ಚಪ್ಪಲಿಯಿಂದ ಕಾಲಿಗೆ ಗಾಯವಾದ್ರೆ ಬ್ಯಾಂಡೇಜ್ ಬಳಸಿ. ಚಪ್ಪಲಿ ಧರಿಸುವ ಮೊದಲು ಗಾಯವಾದ ಜಾಗಕ್ಕೆ ಬ್ಯಾಂಡೇಜ್ ಹಚ್ಚಿಕೊಂಡ್ರೆ ನಡೆಯಲು ಕಷ್ಟಪಡಬೇಕಾಗಿಲ್ಲ.
ಹೊಸ ಚಪ್ಪಲಿಯಿಂದ ಗಾಯವಾಗುತ್ತೆ ಎಂಬ ಅನುಮಾನವಿದ್ರೆ ಮೊದಲೇ ಟಾಲ್ ಕಂ ಪೌಡರ್ ಬಳಸಿ. ಇದು ನೋವನ್ನು ಕಡಿಮೆ ಮಾಡುತ್ತದೆ. ಕಾಲು ಶುಷ್ಕವಾಗಿರುವಾಗ ಪೌಡರ್ ಹಾಕಿ ನಂತ್ರ ಚಪ್ಪಲಿ ಅಥವಾ ಬೂಟ್ ಧರಿಸಿ.
ಚಪ್ಪಲಿ ಕಚ್ಚುವ ಜಾಗದಲ್ಲಿ ಆಲ್ಕೋಹಾಲ್ ಬಳಸಿ. ಇಲ್ಲವಾದ್ರೆ ಆಲೂಗಡ್ಡೆಯನ್ನು ಇದಕ್ಕೆ ಬಳಸಬಹುದು. ರಾತ್ರಿ ಪೂರ್ತಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಬೂಟಿನೊಳಗೆ ಇಡಿ. ಬೆಳಿಗ್ಗೆ ಬೂಟನ್ನು ಸ್ವಚ್ಛಗೊಳಿಸಿ ಧರಿಸಿ.