ಟ್ವಿಟರ್ ಬಳಕೆದಾರ ಕೂಪರ್ ಬ್ಲೂ ಬರ್ಡ್ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. “ಪುರುಷರು ಭಾವನಾತ್ಮಕರಾಗಿದ್ದಾರೆಯೇ? ಎಂಬುದು ಅವರ ಪ್ರಶ್ನೆ. ಸಾಮಾನ್ಯವಾಗಿ, “ಭಾವನೆಗಳು” ಎಂಬ ಪದದೊಂದಿಗೆ ಸಂಬಂಧ ಹೊಂದಿರುವುದು ಮಹಿಳೆಯರು. ಆದರೆ ಪುರುಷರು ಭಾವನಾತ್ಮಕರಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಅವರು ಟ್ವಿಟರ್ನಲ್ಲಿ ಇಟ್ಟಿದ್ದು ಇದಕ್ಕೆ ಸಹಸ್ರಾರು ಕಮೆಂಟ್ಗಳು ಬಂದಿವೆ.
ಕೂಪರ್ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ, ‘ಸ್ಪೈಕ್’ ಎಂಬ ಹೆಸರಿನ ಬಳಕೆದಾರರು “ಪುರುಷರು ಮಹಿಳೆಯರಿಗಿಂತ ಹೆಚ್ಚು ತಾರ್ಕಿಕ ಮತ್ತು ತರ್ಕಬದ್ಧರಾಗಿದ್ದಾರೆ ಎಂದಿದ್ದು, ಇದಕ್ಕೆ ಹಲವಾರು ಪ್ರತ್ಯುತ್ತರಗಳು ಬಂದಿವೆ.
ಪುರುಷರು ಹೆಚ್ಚು ದೈಹಿಕವಾಗಿ ಆಕ್ರಮಣಕಾರಿಯಾಗಿದ್ದರೆ, ಮಹಿಳೆಯರು ಇತರ ರೂಪಗಳಲ್ಲಿ ಆಕ್ರಮಣಕಾರಿಯಾಗಿರುತ್ತಾರೆ. ಇಬ್ಬರ ಭಾವನೆಗಳೂ ಒಂದೇ ರೀತಿಯಾಗಿದ್ದರೂ ಹೆಚ್ಚಿನ ಸಮಯದಲ್ಲಿ ಪುರುಷರು ಅದನ್ನು ತೋರ್ಪಡಿಸುವುದಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ.
ಕೋಪವನ್ನು ಭಾವನೆ ಎಂದು ಗುರುತಿಸಲು ಅನೇಕ ಪುರುಷರು ನಿರಾಕರಿಸುವುದು ಮಾಮೂಲಾಗಿದೆ. ಆದರೆ ಮಹಿಳೆಯರು ಸುಲಭದಲ್ಲಿ ಕೋಪ ಮಾಡಿಕೊಂಡು ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.