
ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಇದು ಸಾಲ್ಮೊನಲೋಸಿಸ್ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಗೆ ಕಾರಣವಾಗಬಹುದು. ಇದು ಅತಿಸಾರ, ಜ್ವರ ಮತ್ತು ವಾಂತಿಯನ್ನು ಉಂಟುಮಾಡುತ್ತದೆ ಮತ್ತು ಇದರಿಂದ ನಿರ್ಜಲೀಕರಣ ಮತ್ತು ತೀವ್ರ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೋಳಿಗಳು ನೈಸರ್ಗಿಕವಾಗಿ ಸಾಲ್ಮೊನೆಲ್ಲಾವನ್ನು ಹೊಂದಿರುತ್ತವೆ. ಇದು ಅವುಗಳ ಮೊಟ್ಟೆಗಳನ್ನು ಹಾನಿಗೊಳಿಸುತ್ತದೆ.
ಹಸಿ ಮೊಟ್ಟೆಗಳಲ್ಲಿನ ಸಣ್ಣ ಸಂಖ್ಯೆಯಲ್ಲಿರುವ ಬ್ಯಾಕ್ಟೀರಿಯಾಗಳು ಕೋಣೆಯ ತಾಪಮಾನದಲ್ಲಿ ಇದ್ದಾಗ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಇದನ್ನು ಸೇವಿಸಿದರೆ ತೀವ್ರ ಅನಾರೋಗ್ಯಕ್ಕೆ ಒಳಗಾಗಬಹುದು. ಆದರೆ ಬೇಯಿಸಿದ ಮೊಟ್ಟೆಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಬೇಯಿಸಿದ ಮೊಟ್ಟೆಗಳು ಸಾಲ್ಮೊನೆಲ್ಲಾ ಅಪಾಯವನ್ನು ಹೊಂದಿರುವುದಿಲ್ಲ. ಮೊಟ್ಟೆಗಳನ್ನು ಬೇಯಿಸುವುದರಿಂದ ಈ ಬ್ಯಾಕ್ಟೀರಿಯಾಗಳು ಸಾಯುತ್ತದೆ.
ಹಾಗಾಗಿ ಮೊಟ್ಟೆಗಳನ್ನು ಬಳಸುವಾಗ ಈ ನಿಯಮ ಪಾಲಿಸಿ:
– ಹಲವು ದಿನಗಳ ಕಾಲ ಸಂಗ್ರಹಿಸಿದ ಮೊಟ್ಟೆಗಳನ್ನು ಎಂದಿಗೂ ಖರೀದಿಸಬೇಡಿ.
– ಒಡೆದ ಮೊಟ್ಟೆಗಳನ್ನು ಬಳಸುವುದನ್ನು ತಪ್ಪಿಸಿ.
– ಮೊಟ್ಟೆಗಳನ್ನು ಯಾವಾಗಲೂ ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿ.
– ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಿ.
ಹಾಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಹಸಿ ಮೊಟ್ಟೆಗಳನ್ನು ಎಂದಿಗೂ ಸೇವಿಸಬೇಡಿ. ಕರುಳಿನ ಕಾಯಿಲೆಗಳಿಂದ ಬಳಲುತ್ತಿರುವವರು ಹಸಿ ಮೊಟ್ಟೆ ಸೇವಿಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.