alex Certify ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್

ಹ್ಯಾಂಗೋವರ್ ಅನೇಕರಿಗೆ ದೊಡ್ಡ ಸಮಸ್ಯೆ. ಇದರಿಂದ ಹೊರಬರಲು ಕಸರತ್ತು ನಡೆಸುತ್ತಾರೆ. ಅಂತವರಿಗಾಗಿಯೇ ಇಲ್ಲೊಂದು ಅಚ್ಚರಿ ಸುದ್ದಿ ಇದೆ.

ಹ್ಯಾಂಗೋವರ್ ನಿಂದ ಹೊರಬರಲು ಕೆಲವರು ಕಾಫಿಗೆ ಮೊರೆ ಹೋಗುತ್ತಾರೆ, ಮತ್ತೆ ಕೆಲವರು ಮೊಟ್ಟೆ ಒಡೆಯುತ್ತಾರೆ. ಆದರೆ ಹ್ಯಾಂಗೊವರ್‌‌ಗೆ ವಿಭಿನ್ನ ಪರಿಹಾರವೆಂದರೆ ಪಾನೀಯ ಅಥವಾ ಆಹಾರ ಪದಾರ್ಥವಲ್ಲ. ಇದು ವಾಸ್ತವವಾಗಿ ಚಿನ್ನ ಮತ್ತು ನೇರಳೆ ಅಮೆಥಿಸ್ಟ್ (ಪದ್ಮರಾಗ) ಉಂಗುರ ಎಂಬ ಸಂಗತಿ ಬಗ್ಗೆ ಚರ್ಚೆ ನಡೆದಿದೆ.

ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ ಹೇಳುವಂತೆ ಪುರಾತತ್ತ್ವಜ್ಞರು ಯವ್ನೆ ನಗರದಲ್ಲಿ ಬೈಜಾಂಟೈನ್ ಕಾಲದ ವೈನ್ ಕಾರ್ಖಾನೆಯನ್ನು ಉತ್ಖನನ ಮಾಡುವ ವೇಳೆ ಪ್ರಾಚೀನ ಆಭರಣವನ್ನು ಕಂಡುಕೊಂಡರು. ಅತಿಯಾದ ಮದ್ಯಪಾನದ ದುಷ್ಪರಿಣಾಮ ತಡೆಯಲು ಈ ಉಂಗುರವನ್ನು ಧರಿಸಿರಬಹುದು ಎಂದು ಪುರಾತತ್ವಶಾಸ್ತ್ರಜ್ಞ ಅಮೀರ್ ಗೋಲಾನಿ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒನಕೆ ಓಬವ್ವ ಜಯಂತಿಗೆ ಮೋದಿ ನಮನ: ವೀರವನಿತೆ ಧೈರ್ಯ ಎಂದಿಗೂ ಮರೆಯಲಾಗದು ಎಂದ್ರು ಪ್ರಧಾನಿ

ಈ ರತ್ನಕ್ಕೆ ಅನೇಕ ಸದ್ಗುಣ ಹೊಂದಿದೆ, ಕುಡಿತದ ಅಡ್ಡಪರಿಣಾಮವನ್ನು ತಡೆಗಟ್ಟುವುದು ಸೇರಿದಂತೆ – ಹ್ಯಾಂಗೊವರ್ ತಡೆಯಬಹುದು ಎಂದು ಗೋಲಾನಿ ಹೇಳಿದ್ದಾರೆ.

ಅಮೆಥಿಸ್ಟ್ ಅನ್ನು ಬೈಬಲ್‌ನಲ್ಲಿ ಉಲ್ಲೇಖಿಸಲಾಗಿದೆ. ಹನ್ನೆರೆಡು ರೀತಿಯ ವಿಶೇಷ ಬಗೆಯ ಕಲ್ಲುಗಳಲ್ಲಿ ಇದೊಂದು. ಹ್ಯಾಂಗೊವರ್‌ಗಳನ್ನು ತಡೆಗಟ್ಟುವುದು ಸೇರಿದಂತೆ ಅನೇಕ ಒಳ್ಳೆಯ ಗುಣಗಳು ಈ ರತ್ನದೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...