ಶಿವಮೊಗ್ಗ: ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಕುರಿತಂತೆ ಅ. 11 ರಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತುಗುದೂರು ಗ್ರಾಮ ವ್ಯಾಪ್ತಿಯ ಬೇಗುವಳ್ಳಿಯಲ್ಲಿ ಮಾತನಾಡಿದ ಅವರು, ಕಾನು, ಸೊಪ್ಪಿನ ಬೆಟ್ಟ, ಸರ್ಕಾರಿ ಕಾನು, ಗೋಮಾಳ ಮತ್ತಿತರ ಕಂದಾಯ ಜಮೀನುಗಳ ಮಂಜೂರಾತಿಗೆ ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಗರ್ ಹುಕುಂ ಸಾಗುವಳಿ ಮಂಜೂರು ಉದ್ದೇಶಕ್ಕೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಗ್ರಾಮ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಸರ್ಕಾರ ಒಪ್ಪಿಗೆ ನೀಡಿಲ್ಲ. ಜನಪ್ರತಿನಿಧಿಗಳ ಹಿತಕಾಯಲಾಗುವುದು ಎಂದು ಹೇಳಿದ್ದಾರೆ.