
ಬೆಂಗಳೂರು: ಹೊಸವರ್ಷದ ಸಂಭ್ರಮಕ್ಕಿಂತ ಬದುಕು ಮುಖ್ಯವಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ಸೋಂಕು ಹೆಚ್ಚಳದ ಕಾರಣ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ ಎರಡನೇ ಅಲೆಯಲ್ಲಿ ಉದಾಸೀನದಿಂದ ಸಾವು, ನೋವು ಸಂಭವಿಸಿದೆ. ಸ್ಮಶಾನದಲ್ಲಿ ಆಂಬುಲೆನ್ಸ್ ಗಳು ಕ್ಯೂ ನಿಂತಿದ್ದನ್ನು ನೋಡಿದ್ದೇವೆ. ಮತ್ತೆ ಇಂತಹ ಪರಿಸ್ಥಿತಿ ಆಗಬಾರದೆಂದು ನಿರ್ಬಂಧ ವಿಧಿಸಲಾಗಿದೆ. ಎಲ್ಲರೂ ನಿಯಮ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.