ಕಾರವಾರ: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಕೊಟ್ಟಿದ್ದರೂ ಸಹ ನಿರ್ಲಕ್ಷ್ಯಿಸಿ ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್ ನಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಗೋವಾ ಮೂಲದ ಬೋಟ್ ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದೆ. ನವೆಂಬರ್ 29ರಂದು ಗೋವಾದ ಪಣಜಿಯಿಂದ ಹೊರಟಿದ್ದ ಬೋಟ್ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿ ಸಮುದ್ರ ಭಾಗದಲ್ಲಿ ಕೊನೆಯ ಲೊಕೇಷನ್ ತೋರಿಸಿತ್ತು. ಅದಾದ ಬಳಿಕ ನಾಪತ್ತೆಯಾಗಿದೆ.
ಇಂಜಿನ್ ಸಮಸ್ಯೆಯಾಗಿ ಸಮುದ್ರದಲ್ಲಿ ಬೋಟ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೋಟ್ ಮಾಲೀಕ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.