
ರಾಜಮನೆತನಗಳು ಎಂದಾಕ್ಷಣ ಬ್ರಿಟನ್, ಗ್ರೀಸ್ ಅಥವಾ ಸ್ಪೇನ್ ನೆನಪಾಗುತ್ತದೆ. ಆದರೆ ಬ್ರಿಟನ್ ಮತ್ತು ಸ್ಪೇನ್‌ನ ರಾಜಮನೆತನಗಳಿಗಿಂತ ಹೆಚ್ಚು ಶ್ರೀಮಂತ ಮತ್ತು ಶಕ್ತಿಯುತವಾದ ಇತರ ರಾಜ ಕುಟುಂಬಗಳು ಜಗತ್ತಿನಲ್ಲಿವೆ. ಅಲ್ಲಿನ ರಾಜಮನೆತನಗಳ ಜೊತೆಗೆ ರಾಜಕುಮಾರಿಯರು ಕೂಡ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ತಮ್ಮ ಬುದ್ಧಿವಂತಿಕೆಯಿಂದಲೂ ಮನಸೂರೆಗೊಳ್ಳುತ್ತಾರೆ. ಅಂತಹ ಅದ್ಭುತ ರಾಜಕುಮಾರಿಯರ ಬಗ್ಗೆ ತಿಳಿಯೋಣ.
ರಾನಿಯಾ ಅಲ್ ಅಬ್ದುಲ್ಲಾ
ರಾಣಿ ರಾನಿಯಾ ಕುವೈತ್‌ನಲ್ಲಿ ಜನಿಸಿದರು. ಈಕೆಯ ಪೋಷಕರು ಪ್ಯಾಲೆಸ್ಟೀನಿಯರು. ಕೊಲ್ಲಿ ಯುದ್ಧ ಪ್ರಾರಂಭವಾದಾಗ ಅವರ ಕುಟುಂಬ ಜೋರ್ಡಾನ್ ತಲುಪಿತು, ಅಲ್ಲಿ ಆಕೆ ರಾಜಕುಮಾರ ಅಬ್ದುಲ್ಲಾನನ್ನು ಮದುವೆಯಾದಳು. ರಾನಿಯಾ ಕೂಡ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾಳೆ.

ಶೇಖಾ ಅಲ್ ಮಯಸ್ಸಾ ಬಿಂತ್ ಹಮದ್ ಬಿನ್ ಖಲೀಫಾ ಅಲ್ ಥಾನಿ
ಅಲ್ ಮಯಸ್ಸಾ, ಕತಾರ್‌ನ ರಾಜ ತಮೀಮ್ ಬಿನ್ ಹಮದ್ ಅಲ್ ಥಾನಿಯ ಸಹೋದರಿ. ಈಕೆ ಕೂಡ TIME 100 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತು 2.4 ಬಿಲಿಯನ್ ಡಾಲರ್. ಕಲಾ ಕ್ಷೇತ್ರದಲ್ಲಿ ಈಕೆಗೆ ವಿಶೇಷ ಹೆಸರಿದೆ. ದುಬಾರಿ ಕಲಾಕೃತಿಗಳನ್ನು ಖರೀದಿಸಲು ಅವರು ಇಷ್ಟಪಡುತ್ತಾರೆ. ಪಾಲ್ ಗೌಗ್ವಿನ್ ಅವರ ವರ್ಣಚಿತ್ರಕ್ಕಾಗಿ ಅಲ್ ಮಯಸ್ಸಾ 300 ಮಿಲಿಯನ್ ಡಾಲರ್ ಖರ್ಚು ಮಾಡಿದ್ದರು.

ರಾಜಕುಮಾರಿ ಲಲ್ಲಾ ಸಲ್ಮಾ
ಸಲ್ಮಾ ಮೊರಾಕ್ಕೋದ ರಾಜ ಮೊಹಮ್ಮದ್ VI ಪತ್ನಿ. ಸಾಮಾಜಿಕ ಕಾರ್ಯಕರ್ತೆಯೂ ಹೌದು. ಈಕೆ ಅತ್ಯಂತ ಸೌಂದರ್ಯವತಿ. ಬಹಳ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಅವರ ಸಂಪತ್ತಿನ ಮೌಲ್ಯ 1.5 ಮಿಲಿಯನ್ ಡಾಲರ್.
ರಾಜಕುಮಾರಿ ಇಮಾನ್

ಬಿಂಟ್ ಹುಸೇನ್
ಜೋರ್ಡಾನ್ ರಾಜ ಹುಸೇನ್ ಅವರ ಮಗಳು ಇಮಾನ್ ರಾಜಮನೆತನದ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ವಾಷಿಂಗ್ಟನ್‌ನಲ್ಲಿ ಅಧ್ಯಯನ ಮಾಡಿ ನಂತರ ಬ್ರಿಟನ್‌ನ ರಾಯಲ್ ಮಿಲಿಟರಿ ಅಕಾಡೆಮಿಗೆ ಸೇರಿದರು. ಇಮಾನ್, ತಮ್ಮ ಉದ್ಯಮಿ ಪತಿ ಝೈದ್ ಅಹ್ಮದ್ ಮಿರ್ಜಾರಿಂದ ವಿಚ್ಛೇದನ ಪಡೆದ ಬಳಿಕ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡರು. ಅವರ ಸಂಪತ್ತು 1.5 ಬಿಲಿಯನ್ ಡಾಲರ್.
ಅಮೀರಾ ಅಲ್ ತವೀಲ್
ಸೌದಿ ಅರೇಬಿಯಾದ ಈ ಸುಂದರ ರಾಜಕುಮಾರಿ 18ನೇ ವಯಸ್ಸಿನಲ್ಲಿ ವಿವಾಹವಾದಳು. ಆದರೆ 2013 ರಲ್ಲಿ ವಿಚ್ಛೇದನ ಪಡೆದಿದ್ದ ಆಕೆ, 2018 ರಲ್ಲಿ ಎಮಿರಾಟಿ ಬಿಲಿಯನೇರ್ ಖಲೀಫಾ ಬಿನ್ ಬಟ್ಟಿ ಅಲ್ ಮುಹೈ ಅವರನ್ನು ವಿವಾಹವಾದಳು. ಈಕೆ ಯಾವಾಗಲೂ ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಇರುತ್ತಾಳೆ. 2012 ರಲ್ಲಿ ಅರಬ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಳು, ಆಕೆಯ ಸಂಪತ್ತು 32 ಬಿಲಿಯನ್ ಡಾಲರ್.
