alex Certify Watch: ಅಮೆರಿಕಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾದ ಎ.ಆರ್. ರೆಹಮಾನ್ ಗೀತೆ; ‘ತಾಲ್ ಸೇ ತಾಲ್’ ಹಾಡಿಗೆ ಈಜುಕೊಳದಲ್ಲಿ ‘ನೃತ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಅಮೆರಿಕಾ ಕ್ರೀಡಾಪಟುಗಳಿಗೆ ಸ್ಪೂರ್ತಿಯಾದ ಎ.ಆರ್. ರೆಹಮಾನ್ ಗೀತೆ; ‘ತಾಲ್ ಸೇ ತಾಲ್’ ಹಾಡಿಗೆ ಈಜುಕೊಳದಲ್ಲಿ ‘ನೃತ್ಯ’

ಎಆರ್‌ ರೆಹಮಾನ್‌ ಎವರ್ಗ್ರೀನ್‌ ಹಾಡುಗಳಲ್ಲಿ ತಾಲ್‌ ಸೆ ತಾಲ್‌ ಮಿಲಾ ಸೇರಿದೆ. ಈ ಹಾಡು, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಈಗ ಮತ್ತೆ ಈ ಹಾಡನ್ನು ಕೇಳುವ ಅವಕಾಶ ಸಿಕ್ಕಿದೆ. ಅದೂ ವಿಶ್ವ ಅಕ್ವಾಟಿಕ್ಸ್ ದೋಹಾ 2024 ರಲ್ಲಿ.

ವಿಶ್ವ ಅಕ್ವಾಟಿಕ್ಸ್‌ ದೋಹಾ 2024ರಲ್ಲಿ ಯುಎಸ್‌ ಕಲಾತ್ಮಕ ಈಜು ತಂಡ, ಎಆರ್‌ ರೆಹಮಾನ್ ಅವರ ಟೈಮ್‌ಲೆಸ್ ಸಂಯೋಜನೆ ತಾಲ್ ಸೆ ತಾಲ್‌ ಹಾಡನ್ನು ಬಳಸಿಕೊಂಡಿದೆ. ಈ ಹಾಡಿಗೆ ಈಜುಗಾರರು ಅಧ್ಬುತವಾಗಿ ಡಾನ್ಸ್‌ ಮಾಡಿದ್ದಾರೆ.

ಎ. ಆರ್.‌ ರೆಹಮಾನ್‌ ಲೂಪ್ಸ್‌ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈಜುಗಾರರ ಹಾಡಿಗೆ ತಕ್ಕಂತೆ ನೀರಿನಲ್ಲಿ ತಮ್ಮ ನೃತ್ಯ ಕಲೆ ಪ್ರದರ್ಶನ ಮಾಡೋದನ್ನು ನೀವು ನೋಡ್ಬಹುದು.  1999 ರಲ್ಲಿ ಬಿಡಗಡೆಯಾದ ಚಿತ್ರ ತಾಲ್.‌ ಇದ್ರಲ್ಲಿ ಐಶ್ವರ್ಯ ರೈ ಹಾಗೂ ಅಕ್ಷಯ್‌ ಖನ್ನಾ, ಅನಿಲ್‌ ಕಪೂರ್ ನಟಿಸಿದ್ದರು.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...