ಕಳೆದ ತಿಂಗಳು ಭಾರತದಲ್ಲಿ ಪರಿಚಯವಾಗಿದ್ದ ಸ್ಪೋರ್ಟ್ಸ್ ಬೈಕ್ ಎಪ್ರಿಲಿಯಾ ಆರ್ ಎಸ್ 457 ಭಾರತದಲ್ಲಿ ತನ್ನ ಉತ್ಪಾದನೆ ಆರಂಭಿಸಿದೆ. ಮಾತೃಸಂಸ್ಥೆ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಮಹಾರಾಷ್ಟ್ರದ ಬಾರಾಮತಿ ಮೂಲದ ಸ್ಥಾವರದಲ್ಲಿ ಎಪ್ರಿಲಿಯಾ ಹೊಸ ಸ್ಪೋರ್ಟ್ಸ್ ಬೈಕ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ದೃಢಪಡಿಸಿವೆ. ಇದರ ವಿತರಣೆಗಳು ಈ ವರ್ಷ ಮಾರ್ಚ್ 1ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.
ಎಪ್ರಿಲಿಯಾ ಕಳೆದ ತಿಂಗಳು ಭಾರತದಲ್ಲಿ ಆರ್ ಎಸ್ 457 ಅನ್ನು 4.10 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಪರಿಚಯಾತ್ಮಕ ಬೆಲೆಗೆ ಬಿಡುಗಡೆ ಮಾಡಿತು. ಗ್ರಾಹಕರು 15 ಡಿಸೆಂಬರ್ 2023 ರಿಂದ ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಹಾಗೂ ಭಾರತದಾದ್ಯಂತ ಎಪ್ರಿಲಿಯಾ ಮೋಟೋಪ್ಲೆಕ್ಸ್ ಡೀಲರ್‌ಶಿಪ್‌ಗಳಲ್ಲಿ 10,000 ರೂ.ಗೆ ಸ್ಪೋರ್ಟ್ಸ್ ಬೈಕ್ ಅನ್ನು ಮುಂಗಡವಾಗಿ ಬುಕ್ ಮಾಡಲು ಅವಕಾಶವಿತ್ತು. ಎಪ್ರಿಲಿಯಾ ಆರ್‌ಎಸ್ 457 ಬೈಕ್ ಅನ್ನು ಇಟಲಿಯ ನೋಲೆಯಲ್ಲಿರುವ ಎಪ್ರಿಲಿಯಾ ಪ್ರಧಾನ ಕಛೇರಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಲಾಗಿದೆ.
ಹೊಸ ಎಪ್ರಿಲಿಯಾ ಆರ್ ಎಸ್ 457 , 457cc, ಲಿಕ್ವಿಡ್-ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ವೈಶಿಷ್ಟ್ಯಗಳ ವಿಷಯದಲ್ಲಿ ಆರ್ ಎಸ್ 457 ಐದು ಇಂಚಿನ TFT ಬಣ್ಣದ ಉಪಕರಣ, ಬ್ಲೂಟೂತ್ ಸಂಪರ್ಕ, LED ಲೈಟಿಂಗ್, ಬ್ಯಾಕ್‌ಲಿಟ್ ಸ್ವಿಚ್‌ಗೇರ್ ಮತ್ತು ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.