alex Certify ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಶುಭ ಸುದ್ದಿ: ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಶುಭ ಸುದ್ದಿ: ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ

ದಾವಣಗೆರೆ: ಶಿಶುಕ್ಷು ತರಬೇತಿ ಸಂಸ್ಥೆ, ಚೆನ್ನೈ(ದಕ್ಷಿಣ ವಲಯ) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಬಾಪೂಜಿ ಪಾಲಿಟೆಕ್ನಿಕ್‍ನಲ್ಲಿ ಸೆ.12 ರ ಬೆಳಗ್ಗೆ 9.30ಕ್ಕೆ ನೇರ ಸಂದರ್ಶನದಲ್ಲಿ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ಸರ್ಕಾರಿ ಕಂಪನಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ 2020 -2021, 2022, 2023 ಮತ್ತು 2024 ಸಾಲಿನಲ್ಲಿ ತೇರ್ಗಡೆ ಹೊಂದಿದ ಯಾವುದೇ ವಿಭಾಗದ(ಟೆಕ್ನಿಕಲ್ ಅಂಡ್ ನಾನ್ ಟೆಕ್ನಿಕಲ್) ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಭ್ಯರ್ಥಿಗಳು ಹಾಗೂ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ ಮತ್ತು ಬಿಸಿಎ ಪದವಿ ಪಡೆದ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಗಳು ಬಯೋಡೇಟಾ ಮೂರು ಸೆಟ್‍ಗಳು ತರಬೇಕು. ಹೆಚ್ಚಿನ ಮಾಹಿತಿಗಾಗಿ ವೆಬೈಟ್: www.boat-srp.com-Home page -News & Events section.. ವೀಕ್ಷಿಸಬಹುದು. ಹಾಗೂ ದೂ.ಸಂ: 9945251906 , 9916013954 ಸಂಪರ್ಕಿಸಬಹುದು. NATS Portal (https://nats.education.gov.in & Google Form Link: (https://forms.gle/jkCKDErejAWsqbt69))   ನ್ಯಾಟ್ಸ್ ಪೋರ್ಟಲ್, ಗೂಗಲ್ ಫಾರಂ ಲಿಂಕ್ ಅನ್ನು ಬಳಸಿ ನೋಂದಾಯಿಸಿ ಪ್ರಿಂಟ್ ಕಾಪಿಯನ್ನು ಕಡ್ಡಾಯವಾಗಿ ತರಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಲತಾ ನಾಡೀಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...