ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಇದು ಸುಕ್ಕುಗಳು, ಕಪ್ಪು ಕಲೆಗಳು, ರೇಖೆಗಳು, ಮುಂತಾದ ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. ಇದು ಚರ್ಮದಲ್ಲಿ ಹೆಚ್ಚುವರಿ ಮೆಲಾನಿನ್ ರಚನೆಯನ್ನು ಕಡಿಮೆ ಮಾಡಿ ಚರ್ಮವನ್ನು ಬೆಳ್ಳಗಾಗಿಸುತ್ತದೆ.
ಹಾಗಾಗಿ ವಿಟಮಿನ್ ಸಿ ಸಿರಮ್ ಅನ್ನು ಯಾವಾಗಲೂ ಮುಖದ ಮೇಲೆ ಅಪ್ಲೈ ಮಾಡಿ. ಆದರೆ ಇದನ್ನು ಅಪ್ಲೈ ಮಾಡುವಾಗ ಸರಿಯಾದ ವಿಧಾನ ಬಳಸಿ. ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವ ಮೊದಲು ವಿಟಮಿನ್ ಸಿ ಸೀರಮ್ ಅನ್ನು ಬಳಸಬೇಕು.
ಇದನ್ನು ಬೆಳಿಗ್ಗೆ ಅಥವಾ ಸಂಜೆ ಬಳಸಬಹುದಾದರೂ ಇದು ಪರಿಸರದ ಹಾನಿಕಾರಕಗಳ ವಿರುದ್ಧ ನಿಮ್ಮ ಚರ್ಮವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಹಾಗಾಗಿ ಅದನ್ನು ಹಗಲಿನಲ್ಲಿಯೇ ಹಚ್ಚುವುದು ಉತ್ತಮ.
ಹಾಗೇ ವಿಟಮಿನ್ ಸಿ ಸಿರಮ್ ಹಚ್ಚಿದ ಬಳಿಕ ಮಾಯಿಶ್ಚರೈಸರ್ ಹಚ್ಚಿ ಆನಂತರ ಸನ್ ಸ್ಕ್ರೀನ್ ನ್ನು ಹಚ್ಚಿ. ಇದರಿಂದ ನಿಮ್ಮ ಚರ್ಮದ ಮೇಲೆ ಮಾಲಿನ್ಯ, ಧೂಳು, ಶುಷ್ಕ ಗಾಳಿ, ಬ್ಯಾಕ್ಟೀರಿಯಾ ಮುಂತಾದ ಯಾವುದೇ ಹಾನಿಕಾರಕಗಳಿಂದ ಸಮಸ್ಯೆಯಾಗುವುದಿಲ್ಲ.