ಸಾಮಾನ್ಯವಾಗಿ ಕೆಲವರಿಗೆ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಕಾರಣ ವಾತಾವರಣ ಧೂಳು, ಮಾಲಿನ್ಯವಾಗಿರುತ್ತದೆ. ಹಾಗೇ ನಮ್ಮ ಆಹಾರ ಪದ್ಧತಿಯಿಂದ ಕೂಡ ಮೊಡವೆಗಳ ಸಮಸ್ಯೆ ಕಾಡುತ್ತದೆ. ಆದರೆ ಈ ಒಂದು ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳ ಸಮಸ್ಯೆ ಕಾಡುವುದಿಲ್ಲವಂತೆ.
ಮುಖದಲ್ಲಿರುವ ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸಲು ಬೇವಿನ ಎಣ್ಣೆ ರಾಮಾಬಾಣವಾಗಿದೆ. ಇದು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇವು ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಹಾಗೇ ಇದರಲ್ಲಿ ವಿಟಮಿನ್ ಇ ಇದ್ದು, ಇದು ಚರ್ಮವನ್ನು ಪೋಷಿಸುತ್ತದೆಯಂತೆ.
ಹಾಗಾಗಿ ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಮೊದಲು ಮುಖವನ್ನು ಚೆನ್ನಾಗಿ ತೊಳೆದು ನಂತರ ಬೇವಿನ ಎಣ್ಣೆಯಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿ ಅದನ್ನು ಮೊಡವೆಗಳ ಮೇಲೆ ಹಚ್ಚಿ. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಿಗ್ಗೆ ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಇದರಿಂದ ಮೊಡವೆಗಳ ಸಮಸ್ಯೆ ಕಾಡುವುದಿಲ್ಲ.
ಹಾಗೇ ಬೇವಿನ ಎಣ್ಣೆಯ ಜೊತೆಗೆ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಇದರಿಂದ ಮುಖದಲ್ಲಿರುವ ಮೊಡವೆಗಳ ಜೊತೆಗೆ ಅದರ ಕಲೆಗಳು ಮಾಯವಾಗುತ್ತದೆ.
ಅಲ್ಲದೇ ಬೇವಿನ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ನಿಮ್ಮ ತ್ವಚೆಯಲ್ಲಿ ಕಾಲಜನ್ ಮಟ್ಟ ಹೆಚ್ಚಾಗುತ್ತದೆ. ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದರಿಂದ ಚರ್ಮದಲ್ಲಿ ದದ್ದುಗಳು, ಸುಕ್ಕುಗಳು, ಅಲರ್ಜಿ ಸಮಸ್ಯೆ ಕೂಡ ಕಾಡುವುದಿಲ್ಲ.