ವಾತಾವರಣದ ಕೊಳೆ, ಧೂಳು, ಮಾಲಿನ್ಯದಿಂದ ಕೂದಲು ಹಾನಿಗೊಳಗಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಈ ಕೂದಲು ಉದುರಿ ಹೋಗಿ ಬೊಕ್ಕ ತಲೆಯ ಸಮಸ್ಯೆ ಕಾಡಬಹುದು. ಅಲ್ಲದೇ ಇದು ಕೂದಲಿನ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಈ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಈ ಹೇರ್ ಪ್ಯಾಕ್ ಹಚ್ಚಿ.
ಮೊಟ್ಟೆಯ ಹಳದಿ ಲೋಳೆಯಲ್ಲಿ ಕೊಬ್ಬು ಮತ್ತು ಪ್ರೋಟೀನ್ ಹೆಚ್ಚಾಗಿದೆ. ಇದು ಹಾನಿಗೊಳಗಾದ ಕೂದಲಿಗೆ ಜೀವ ನೀಡುತ್ತದೆ. ಹಾಗೇ ಮೊಸರಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಕೂದಲಿನ ಬೇರುಗಳನ್ನು ಬಲಗೊಳಿಸುತ್ತದೆ. ಮತ್ತು ಕೂದಲನ್ನು ತೇವಗೊಳಿಸಿ ಅವು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. ಹಾಗಾಗಿ 2 ಮೊಟ್ಟೆಗೆ 1 ಚಮಚ ಜೇನುತುಪ್ಪ ಮತ್ತು 2 ಚಮಚ ಮೊಸರನ್ನು ಬೆರೆಸಿ ಹೇರ್ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ.
ಹಾಗೇ ಹಾನಿಗೊಳಗಾದ ಕೂದಲಿಗೆ ಅಲೋವೆರಾ ತುಂಬಾ ಒಳ್ಳೆಯದು. ಇದು ಹಾನಿಗೊಳಗಾದ ಕೂದಲಿಗೆ ತೇವವನ್ನು ನೀಡಿ ಜೀವ ತುಂಬುತ್ತದೆ. ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ 3 ಚಮಚ ಮೊಸರಿಗೆ 4 ಚಮಚ ಅಲೋವೆರಾ ಜೆಲ್, 2 ಚಮಚ ತೆಂಗಿನೆಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.