alex Certify ನೆತ್ತಿಯಲ್ಲಿ ಸಂಗ್ರಹವಾದ ಕೊಳೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆತ್ತಿಯಲ್ಲಿ ಸಂಗ್ರಹವಾದ ಕೊಳೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಹಚ್ಚಿ

ಮೆಹಂದಿಯೊಂದಿಗೆ ಕೂದಲಿಗೆ ಈ ಪದಾರ್ಥಗಳನ್ನು ಬೆರೆಸಿ ಹಚ್ಚಿ; ಸಿಲ್ಕಿ ಹೇರ್ ನಿಮ್ಮದಾಗಿಸಿಕೊಳ್ಳಿ! – News18 ಕನ್ನಡ

ಬೆವರಿನಿಂದ ಕೊಳೆ, ಧೂಳು ನೆತ್ತಿಯಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಕೂದಲಿನ ಬುಡಕ್ಕೆ ಹಾನಿಯಾಗುತ್ತದೆ. ಹಾಗಾಗಿ ಕೂದಲುದುರುವ ಸಮಸ್ಯೆ ಕಾಡುತ್ತದೆ. ಆದಕಾರಣ ಈ ಕೊಳೆಯನ್ನು ನಿವಾರಿಸಲು ಈ ಹೇರ್ ಪ್ಯಾಕ್ ಹಚ್ಚಿ.

ನೆತ್ತಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮೊಸರು ಮತ್ತು ಕಡಲೆಹಿಟ್ಟನ್ನು ಬಳಸಬಹುದು. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ನೆತ್ತಿಯನ್ನು ಆಳವಾಗಿ ಸ್ವಚ್ಛ ಮಾಡುತ್ತದೆ. ತಲೆಹೊಟ್ಟನ್ನು ನಿವಾರಿಸುತ್ತದೆ. ಕಡಲೆ ಹಿಟ್ಟು ಜಿಡ್ಡಿನಂಶವನ್ನು ನಿವಾರಿಸುತ್ತದೆ. ಹಾಗಾಗಿ 2 ಚಮಚ ಕಡಲೆ ಹಿಟ್ಟಿಗೆ 4 ಚಮಚ ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿ ಕೂದಲಿನ ಬುಡಕ್ಕೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.

ಹಾಗೇ ಅಲೋವೆರಾ ಮತ್ತು ನಿಂಬೆ, ನೆತ್ತಿಯ ಕೊಳೆಯನ್ನು ನಿವಾರಿಸುತ್ತದೆಯಂತೆ. ಹಾಗಾಗಿ 2 ಚಮಚ ಅಲೋವೆರಾ ಜೆಲ್ ಗೆ 1 ಚಮಚ ನಿಂಬೆರಸವನ್ನು ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ 15 ನಿಮಿಷ ಬಿಟ್ಟು ಕೂದಲನ್ನು ತೊಳೆಯಿರಿ. ಇದರಿಂದ ನೆತ್ತಿಯಲ್ಲಿ ಸಂಗ್ರಹವಾದ ಕೊಳೆಯ ಜೊತೆಗೆ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...