ಬಿಸಿಲು, ಮಾಲಿನ್ಯ, ಧೂಳಿನಿಂದ ತ್ವಚೆ ಮಂದವಾಗಿ ಕಾಣುತ್ತದೆ. ಎಷ್ಟೇ ಮೇಕಪ್ ಹಚ್ಚಿದರೂ ಕೂಡ ಅದರಿಂದ ಹೊಳೆಯುವ ಮೈಕಾಂತಿ ಸಿಗುವುದಿಲ್ಲ. ಹಾಗಾಗಿ ನಿಮಗೆ ಹೊಳೆಯುವ ಮೈಕಾಂತಿ ಬೇಕಾದಲ್ಲಿ ಈ ಫೇಸ್ ಪ್ಯಾಕ್ ಹಚ್ಚಿ.
ಹೊಳೆಯುವ ತ್ವಚೆಯನ್ನು ಪಡೆಯಲು ಜೇನುತುಪ್ಪ, ಹಾಲನ್ನು ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
ಹಾಗೇ ಮೊಸರು ಮತ್ತು ರೋಸ್ ವಾಟರ್ ಅನ್ನು ಬೆರೆಸಿದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ.
ಅಗಸೆ ಬೀಜವನ್ನು ಕೂದಲಿನ ಆರೈಕೆಯಲ್ಲಿ ಬಳಸುತ್ತಾರೆ. ಆದರೆ ಹೊಳೆಯುವ ತ್ವಚೆಗಾಗಿ ಅಗಸೆ ಬೀಜವನ್ನು ಬಳಸಬಹುದು. ಅಗಸೆ ಬೀಜದ ಪುಡಿಗೆ ಅಲೋವೆರಾ ಜೆಲ್ ಅನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ. ಇದು ಚರ್ಮವನ್ನು ಹೈಡ್ರೇಟ್ ಆಗಿಡುತ್ತದೆ.