ಬೇಸಿಗೆ ಕಾಲ ಬರುತ್ತಿದ್ದಂತೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಶುರುವಾಗುತ್ತದೆ. ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದು ಚರ್ಮದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಮುಖದ ಮೇಲೆ ಪಪ್ಪಾಯಿ ಜೆಲ್ ತಯಾರಿಸಿ ಬಳಸಿ.
1 ಕಪ್ ಕತ್ತರಿಸಿದ ಪಪ್ಪಾಯಿ ಹಣ್ಣನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ 3 ವಿಟಮಿನ್ ಇ ಕ್ಯಾಪ್ಸುಲ್ ಹಾಗೂ 3 ಚಮಚ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೊನೆಯಲ್ಲಿ 1 ಚಮಚ ಗ್ಲಿಸರಿನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಜೆಲ್ ಸಿದ್ಧವಾಗುತ್ತದೆ. ಇದನ್ನು ಫ್ರಿಜ್ ನಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ರಾತ್ರಿ ಮಲಗುವ ಮುನ್ನ ಈ ಜೆಲ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ, ಬೆಳಿಗ್ಗೆ ವಾಶ್ ಮಾಡಿ.
ಇದರಿಂದ ಮುಖದ ಕಲೆಗಳು ನಿವಾರಣೆಯಾಗುತ್ತದೆ. ಚರ್ಮ ಮೃದುವಾಗಿ ಕೋಮಲವಾಗುತ್ತದೆ. ಹೊಳೆಯುವ ಆಕರ್ಷಕವಾದ ತ್ವಚೆ ನಿಮ್ಮದಾಗುತ್ತದೆ.