ದಾವಣಗೆರೆ: ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ 2021-22 ನೇ ಸಾಲಿಗೆ ರಾಜೀವ್ಗಾಂಧಿ ವಸತಿ ನಿಗಮವು ಪರಿಶಿಷ್ಟ ಜಾತಿಯವರಿಗೆ 9 ಹಾಗೂ ಪರಿಶಿಷ್ಟ ಪಂಗಡದವರಿಗೆ 3 ಸೇರಿದಂತೆ ಒಟ್ಟು 12 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು. ಆಸಕ್ತಿವುಳ್ಳ ಅರ್ಹ ಫಲಾನುಭವಿಗಳು ಜ.25 ರ ಒಳಗೆ ಸೂಕ್ತ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ನಮೂನೆಯಲ್ಲಿ ಜಗಳೂರು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಯಸುವವರು ಖಾಲಿ ನಿವೇಶನ ಹೊಂದಿರಬೇಕು, 2 ಪಾಸ್ಪೋರ್ಟ್ ಪೋಟೋ, ಕುಟುಂಬ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ತಹಶೀಲ್ದಾರ್ ಅವರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿವೇಶನ ಖಾತೆ ನಕಲು (ಕೆ.ಎಂ.ಎಫ್ ನಮೂನೆ-3) ಪ್ರತಿಗಳನ್ನು ಹಾಗೂ ತನ್ನ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು 20 ರೂ. ಛಾಪಾ ಕಾಗದದಲ್ಲಿ ಪ್ರಮಾಣಪತ್ರವನ್ನು ಜಗಳೂರು ಪಟ್ಟಣದ ಪಂಚಾಯಿತಿಯ ಆಶ್ರಯ ಶಾಖೆಗೆ ಸಲ್ಲಿಸಬೇಕು ಎಂದು ಜಗಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.