alex Certify ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಹಾಸನ: ಹಾಸನ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಆನ್‌ಲೈನ್ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮಕ್ಕಳ ತಜ್ಞರು, ಫಿಜಿಷಿಯನ್, ಸೈಕಿಯಾಟ್ರಿಸ್ಟ್, ಎಂ.ಬಿ.ಬಿ.ಎಸ್. ವೈದ್ಯಾಧಿಕಾರಿಗಳು, ಪಂಚಕರ್ಮ ತಜ್ಞ ವೈದ್ಯಾಧಿಕಾರಿಗಳು, ನೇತ್ರ ಶಾಸ್ತ್ರಜ್ಞರು, ಶುಶ್ರೂಷಕಿಯರು(ಮಹಿಳೆ), ಕಿರಿಯ ಮಹಿಳಾ ಆರೋಗ್ಯ  ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕರು, ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್, ಬ್ಲಾಕ್ ಎಪಿಡವಾಲಾಜಿಸ್ಟ್, ಕೌನ್ಸೆಲರ್, ಡಯಟ್ ಕೌನ್ಸೆಲರ್, ಜಿಲ್ಲಾ ಸಂಯೋಜಕರು, ಲ್ಯಾಬ್ ಚೆಕ್ನಿಸಿಯನ್ಸ್, ಪ್ರೋಗ್ರಾಮ್ ಮ್ಯಾನೇಜರ್. ಟಿಬಿಹೆಜ್‌ವಿ ಮತ್ತು ಫಿಜಿಯೋಥೆರಪಿಸ್ಟ್ ಸಂಖ್ಯೆಗೆ ಅನುಗುಣವಾಗಿ ಅನ್ವಯಿಸುವ ರೋಸ್ಟರ್ ಕಂ ಮೆರಿಟ್ ಸಿಸ್ಟಮ್ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಷರತ್ತು ಮತ್ತು ನಿಬಂಧನೆಗೆ ಒಳಪಟ್ಟು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಯುಕ್ತ ಸದರಿ ಹುದ್ದೆಗಳ ವಿದ್ಯಾರ್ಹತೆ, ವಯೋಮಿತಿ ಹುದ್ದೆಗಳ ಸಂಖ್ಯೆ ಮತ್ತು ಇತರೆ ಮಾಹಿತಿಯನ್ನು ಈ ಕಚೇರಿಯ ಸೂಚನಾ ಫಲಕ ಹಾಗೂ ಆರೋಗ್ಯ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ(https://nhm.karnataka.gov.in/)285URI ನಲ್ಲಿ ಪಡೆದುಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ. https://hassan.nic.in/en/notice category/recruitment/ https://hassan.nic.in/en/ಅರ್ಜಿ ಸಲ್ಲಿಸಲು ನ.15 ರಂದು ಕೊನೆಯ ದಿನಾಂಕವಾಗಿದೆ.

ಗುತ್ತಿಗೆ ತಜ್ಞ ವೈದ್ಯರು ಹಾಗೂ ವೈದ್ಯಾಧಿಕಾರಿಗಳ ನೇರ ಸಂದರ್ಶನವು ಪ್ರತಿ ದಿನ ವೇಳೆಯಲ್ಲಿ ಈ ಕಚೇರಿಯಲ್ಲಿ ನಡೆಸಲಾಗುತ್ತದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕಚೇರಿಯಲ್ಲಿ ನ.28 ರಂದು ಶುಶ್ರೂಷಕಿಯರಿಗೆ ಹಾಗೂ ನ.30 ರಂದು ಉಳಿದ ಹುದ್ದೆಗಳಿಗೆ ದಾಖಲಾತಿ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...