alex Certify ರೈತರೇ ಗಮನಿಸಿ : ಹಾಲು ಕರೆಯುವ ಯಂತ್ರ ಸೇರಿ ವಿವಿಧ ಪರಿಕರ ಪಡೆಯಲು ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರೇ ಗಮನಿಸಿ : ಹಾಲು ಕರೆಯುವ ಯಂತ್ರ ಸೇರಿ ವಿವಿಧ ಪರಿಕರ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : 2024-25 ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮದಡಿಯಲ್ಲಿ ಹಾಲು ಕರೆಯುವ ಯಂತ್ರ, ರಬ್ಬರ್ ನೆಲಹಾಸು ಹಾಗೂ ಸೈಲೇಜ್ ಬ್ಯಾಗ್ಗಳನ್ನು ವಿತರಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಾಲು ಕರೆಯುವ ಯಂತ್ರ 2 ಫಲಾನುಭವಿಗಳಿಗೆ ತಲಾ 1 ರಂತೆ, ರಬ್ಬರ್ ನೆಲಹಾಸು 11 ಫಲಾನುಭವಿಗಳಿಗೆ ತಲಾ 2 ರಂತೆ ಹಾಗೂ ಸೈಲೇಜ್ ಬ್ಯಾಗ್ 45 ಫಲಾನುಭವಿಗಳಿಗೆ ತಲಾ 100 ಕೆಜಿ ಸಾಮರ್ಥ್ಯದ 1 ಹಾಗೂ 500 ಕೆಜಿ ಸಾಮರ್ಥ್ಯದ 1 ಬ್ಯಾಗ್ ಅನ್ನು ನೀಡಲಾಗುತ್ತದೆ. ಸದರಿ ಫಲಾನುಭವಿಗಳ ಆಯ್ಕೆಯಲ್ಲಿ ರೋಸ್ಟರ್ ನಿಯಾಮಾನುಸಾರದ ಕ್ರಮ ವಹಿಸಲಿದ್ದು, ಆಸಕ್ತರು ತಮ್ಮ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ/ಮುಖ್ಯ ಪಶುವೈದ್ಯಾಧಿಕಾರಿಗಳು ಇವರಿಂದ ಅರ್ಜಿ ನಮೂನೆಯನ್ನು ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ಮಾ.17 ರೊಳಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ, ಎಪಿಎಂಸಿ ಆವರಣ ಶಿವಮೊಗ್ಗ ಈ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...