ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿಆರ್ಡಬ್ಲ್ಯೂ) ಮತ್ತು ನಗರ ಪ್ರದೇಶಗಳಲ್ಲಿ ನಗರ ಪುನರ್ವಸತಿ ಕಾರ್ಯಕರ್ತರ (ಯು.ಆರ್.ಡಬ್ಲ್ಯೂ) ಹುದ್ದೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಧಾರವಾಡ ತಾಲೂಕಿನ ಬೇಲೂರ, ಗುಳೇದಕೊಪ್ಪ, ಅಳ್ನಾವರ ತಾಲೂಕಿನ ಕಡಬಗಟ್ಟಿ, ಹುಬ್ಬಳ್ಳಿ ತಾಲೂಕಿನ ಅರಳೀಕಟ್ಟಿ, ಮಲಿಗವಾಡ, ಬಂಡಿವಾಡ, ಕುಂದಗೋಳ ತಾಲೂಕಿನ ಮತ್ತಿಗಟ್ಟಿ, ಬಾರದ್ವಾಡ, ರಾಮನಕೊಪ್ಪ, ಇಂಗಳಗಿ, ಪಶುಪತಿಹಾಳ, ತರ್ಲಘಟ್ಟ, ಹರಲಾಪೂರ ಮತ್ತು ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪ, ತ.ಹೊನ್ನಳ್ಳಿ ಗ್ರಾಮ ಪಂಚಾಯತಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳು ಖಾಲಿ ಇವೆ.
ಮತ್ತು ಹುಬ್ಬಳ್ಳಿ ನಗರದಲ್ಲಿ ವಲಯ ಕಚೇರಿ 9, 10, 11 ಸಂಬಂಧಿಸಿದಂತೆನಗರ ಪುನರ್ವಸಿ ಕಾರ್ಯಕರ್ತರ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
ಆಸಕ್ತ ವಿಕಲಚೇತನ ಅಭ್ಯರ್ಥಿಗಳು
ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳನ್ನು ಬರೆದು ಆಯಾ ತಾಲೂಕಿನ ತಾಲೂಕಾ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು(ಎಂಆರ್ಡಬ್ಲ್ಯೂ) ಇವರಿಗೆ ಅಕ್ಟೋಬರ್ 10, 2024 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರು (ಎಂ.ಆರ್.ಡಬ್ಲ್ಯೂ) ಗಳನ್ನು ಹಾಗೂ ಕಛೇರಿ ದೂರವಾಣಿ ಸಂಖ್ಯೆ:0836-2744474 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.