ಬೆಂಗಳೂರು : ಗುತ್ತಿಗೆ ಆಧಾರದ ಮೇಲೆ ನರ್ಸಿಂಗ್ ಆಫೀಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ತನ್ನ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು (ನಿಗದಿತ ನಮೂನೆಯಲ್ಲಿ) ಎಲ್ಲಾ ಅಗತ್ಯ ದಾಖಲೆಗಳ ದೃಢೀಕರಿಸಿದ ಫೋಟೋಕಾಪಿಗಳೊಂದಿಗೆ 15.04.2025 ರಂದು ಸಂಜೆ 5:30 ರೊಳಗೆ ಮುಖ್ಯ ಆಡಳಿತಾಧಿಕಾರಿಗಳ ಕಚೇರಿ, ಬಿಎಂಸಿಆರ್ಐ, ಬೆಂಗಳೂರು ಇವರಿಗೆ ಸಲ್ಲಿಸಬಹುದು. ಸಂದರ್ಶನದ ದಿನಾಂಕಗಳನ್ನು ಸಂಸ್ಥೆಯ ವೆಬ್ಸೈಟ್ನಲ್ಲಿ ತಿಳಿಸಲಾಗುತ್ತದೆ.
ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ
> ಅರ್ಜಿಯ ಜೊತೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸ್ವ-ದೃಢೀಕರಣದೊಂದಿಗೆ ಸಲ್ಲಿಸುವುದು.
> ಅರ್ಜಿದಾರರು ದಾಖಲೆ ಪರಿಶೀಲನಾ / ಸಂದರ್ಶನ ಸಮಯದಲ್ಲಿ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಕಡ್ಡಾಯವಾಗಿ ಸಲ್ಲಿಸುವುದು.
> ಅವಶ್ಯಕತೆಗೆ ಅನುಗುಣವಾಗಿ ಕಿರುಪಟ್ಟಿ 1:3 ತಯಾರಿಸಿ ಸಂದರ್ಶನ / ದಾಖಲೆ ಪರಿಶೀಲನೆಗೆ ಕರೆಯಲಾಗುವುದು.
> 371ಜೆ ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ.8% ರಷ್ಟು ಆದ್ಯತೆ ನೀಡಲಾಗುವುದು.




