alex Certify ಉದ್ಯೋಗ ವಾರ್ತೆ : ‘ಕಂದಾಯ ಇಲಾಖೆ’ ಯಲ್ಲಿ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ವಾರ್ತೆ : ‘ಕಂದಾಯ ಇಲಾಖೆ’ ಯಲ್ಲಿ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯು ಗ್ರಾಮ ಆಡಳಿತಾಧಿಕಾರಿಗಳ ಒಂದು ಸಾವಿರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಭ್ಯರ್ಥಿಗಳು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿದ್ದು, ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಎರಡನೇ ಪಿ.ಯು.ಸಿ ಅಥವಾ ತತ್ಸಮಾನ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

ಒಟ್ಟು 1000 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯು ಎರಡನೇ ಪಿಯುಸಿ ಅಥವಾ ತತ್ಸಮಾನತೆಯ ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 21,400-42,000 ನಿಗದಿಯಾಗಿರುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 04 ರಿಂದ ಆರಂಭವಾಗಲಿದ್ದು, ಏಪ್ರೀಲ್ 03 ರವರೆಗೆ ಅವಕಾಶವಿದೆ. ಆನ್‍ಲೈನ್ ಮೂಲಕ ಶುಲ್ಕ ಪಾವತಿ ಮಾಡಲು ಏಪ್ರೀಲ್ 06 ಕೊನೆಯ ದಿನಾಂಕವಾಗಿರುತ್ತದೆ.

ಇಲಾಖೆಯ ಅಧಿಕೃತ ವೆಬ್‍ಸೈಟ್ http://kea.kar.nic.in ನಲ್ಲಿ ತೋರಿಸುವ “Village Administrative Officer Recruitment- 2024” ಲಿಂಕ್ ಅನ್ನು ಆಯ್ಕೆ ಮಾಡಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬಹುದು. ಪೆನ್ ಮತ್ತು ಪೇಪರ್ ಉಪಯೋಗಿಸಿ ಅರ್ಜಿಯನ್ನು ಸಲ್ಲಿಸುವ ವಿಧಾನ ಇರುವುದಿಲ್ಲ.
ಅಭ್ಯರ್ಥಿಗಳ ಅರ್ಹತೆ ವಿವರ, ವಯೋಮಿತಿ, ಸ್ಪರ್ಧಾತ್ಮಕ ಪರೀಕ್ಷೆ, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಯ ವಿವರ ಹಾಗೂ ಪ್ರವರ್ಗವಾರು ಮತ್ತು ಜಿಲ್ಲಾವಾರು ಹುದ್ದೆಗಳ ವಿವರಗಳು ಹಾಗೂ ಇನ್ನಿತರ ಮಾಹಿತಿಗಾಗಿ ಕೆಇಎ ವೆಬ್‍ಸೈಟ್: http://kea.kar.nic.in ಗೆ ಸಂಪರ್ಕಿಸಬಹುದು.

ಸೂಚನೆ:
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ನೇಮಕಾತಿಯು ಸರ್ಕಾರ, ಸಕ್ಷಮ ಪ್ರಾಧಿಕಾರ, ನೇಮಕಾತಿ ಪ್ರಾಧಿಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖ ದಿನಾಂಕಗಳು

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ದಿನಾಂಕ 04-03-2024ರಿಂದ ಆರಂಭಗೊಳ್ಳಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-04-2024 ಆಗಿರುತ್ತದೆ. ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 06-04-2024.

ವಯೋಮಿತಿ

ಸಾಮಾನ್ಯ ವರ್ಗದವರಿಗೆ 35 ವರ್ಷಗಳು. ಪ್ರವರ್ಗ 2ಎ, 2ಬಿ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು. ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು

ಒಟ್ಟು ಹುದ್ದೆಗಳ ಸಂಖ್ಯೆ

1000

ವೇತನ ಶ್ರೇಣಿ
21400-42000

• ಶುಲ್ಕ ಸಾಮಾನ್ಯ, ಹಿಂದುಳಿದ ವರ್ಗದವರಿಗೆ 750 ರೂ. ಎಸ್ಸಿ ಎಸ್ಟಿ, ವಿಕಲಚೇತನರಿಗೆ 500 ರೂ. ನಿಗದಿಪಡಿಸಲಾಗಿದೆ.
• ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರೀಕ್ಷಾ ಪ್ರಾಧಿಕಾರ ನಡೆಸಲಿದ್ದು. ಪರೀಕ್ಷೆಯಲ್ಲಿ ಆಯ್ಕೆಯಾಗಬೇಕು
• ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
• ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ 21400 ರಿಂದ 42000 ರೂ. ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ..?

1) ಮೊದಲು kea.kar.nic ವೆಬ್ಸೈಟ್ ಕ್ಲಿಕ್ ಮಾಡಿ, ಅಲ್ಲಿ ಗ್ರಾಮ ಅಡಳಿತಾಧಿಕಾರಿ ಹುದ್ದೆಗೆ ನೇಮಕಾತಿ ಎಂಬುದರ ಮೇಲೆ ಕ್ಲಿಕ್ ಮಾಡಿ

2) .ಜಿಲ್ಲಾವಾರು, ಹುದ್ದೆಗಳ ಲಭ್ಯತೆ, ಮೀಸಲಾತಿವಾರು ಸೀಟುಗಳ ಹಂಚಿಕೆಯನ್ನು ಮಾಡಲಾಗಿದ್ದು, ಇದರಲ್ಲಿ ಅರ್ಜಿ ಸಲ್ಲಿಸುವ ಮಾರ್ಗದ ವಿವರ ಇದೆ. ಅಲ್ಲಿಗೆ ತೆರಳಿ ನಿಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಯಾವ ಜಿಲ್ಲೆ ಎನ್ನುವ ಅಂಶವನ್ನು ನಮೂದಿಸಬೇಕು. ನಂತರ ಶುಲ್ಕವನ್ನು ಭರ್ತಿ ಮಾಡಿದ ಮಾಹಿತಿಯನ್ನೂ ಅದರಲ್ಲಿ ಉಲ್ಲೇಖಿಸಬೇಕು.

3)ಅರ್ಜಿ  ಯನ್ನು ಸ್ವೀಕಾರ ಮಾಡಿ ವೆರಿಫೈ ಮಾಡಲಾಗುತ್ತದೆ, ನಂತರ ಪರೀಕ್ಷೆಗೆ ಪ್ರವೇಶ ಪತ್ರ ಬರುತ್ತದೆ. ನಂತರ  ನಿಮ್ಮ  ಪರೀಕ್ಷೆ ಪ್ರವೇಶ ಪತ್ರವೂ ಬರಲಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...