ಮಡಿಕೇರಿ: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2021-22 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ವಿದ್ಯಾರ್ಥಿಗಳಿಗೆ “ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ” ಯಡಿ ಸರ್ಕಾರಿ/ ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೆ ಇರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ಇಲಾಖೆ ವೆಬ್ ಸೈಟ್ https://dom.karnataka.gov.in ಅಥವಾ ಸಂಬಂಧಪಟ್ಟ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿಯಿಂದ ಪಡೆದುಕೊಳ್ಳುವುದು. ಭರ್ತಿ ಮಾಡಿದ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ನವೆಂಬರ್ 30 ರೊಳಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿ, ಮೌಲಾನಾ ಅಜಾದ್ ಭವನ, ಎಫ್.ಎಂ.ಸಿ.ಕಾಲೇಜು ಹತ್ತಿರ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿಗೆ ಸಲ್ಲಿಸುವುದು.
ಯಾವುದೇ ಇಲಾಖೆಯ ಸರ್ಕಾರಿ/ ಸರ್ಕಾರಿ ಅನುದಾನಿತ ವಿದ್ಯಾರ್ಥಿ ನಿಲಯ/ ವಸತಿ ಕಾಲೇಜುಗಳಲ್ಲಿ ಪ್ರವೇಶ ದೊರೆಯದ ಹಾಗೂ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿದ್ದಾರೆ.
ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜು ಇರುವ ಜಿಲ್ಲೆಯ ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸುವುದು. ಕುಟುಂಬದ ಆದಾಯ ಮಿತಿಯು ಪ್ರವರ್ಗ-1 ಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ(ಬೌದ್ಧ), ಪ್ರವರ್ಗ-2ಬಿ(ಮುಸ್ಲಿಂ) ಮತ್ತು ಪ್ರವರ್ಗ3 ಬಿ(ಕ್ರಿಶ್ಚಿಯನ್) ವರ್ಗಗಳಿಗೆ ರೂ.2 ಲಕ್ಷದ ಮಿತಿಯೊಳಗಿರಬೇಕು.
ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಹಿಂದಿನ ವರ್ಷದ ಅಂಕಪಟ್ಟಿ (ವಾರ್ಷಿಕ/ 2 ಸೆಮಿಸ್ಟರ್), ವಿದ್ಯಾರ್ಥಿಯ ಜಾತಿ ಮತ್ತು ಕುಟಂಬದ ಆದಾಯ ಪ್ರಮಾಣ ಪತ್ರ (ತಹಶೀಲ್ದಾರರಿಂದ), ಅಧಾರ್ ಕಾರ್ಡ್ ಮತ್ತು ವಿದ್ಯಾರ್ಥಿಯ ಬ್ಯಾಂಕ್ ಖಾತೆ ಪಾಸ್ ಪುಸ್ತಕ, ಪ್ರಸಕ್ತ ವರ್ಷದ ಶುಲ್ಕ ರಶೀತಿ, ಮಾಹೆವಾರು ಹಾಜರಾತಿ ಪಟ್ಟಿ ಕಡ್ಡಾಯವಾಗಿ ಕಾಲೇಜಿಗಿರುವ ದೂರದ ಬಗ್ಗೆ ದೃಢೀಕರಣ (ಸಂಬಂಧಪಟ್ಟ ಪಂಚಾಯಿತಿ, ಪ.ಪಂ./ ನಗರಸಭೆಯಿಂದ) ಅಗತ್ಯ ಮಾಹಿತಿಗೆ ಇಲಾಖಾ ವೆಬ್‍ಸೈಟ್ https://dom.karnataka.gov.in/kodagu/public ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, “ಮಾಹಿತಿ ಕೇಂದ್ರ” ಮೌಲಾನಾ ಅಜಾದ್ ಭವನ, ಎಫ್.ಎಂ.ಸಿ. ಕಾಲೇಜು ಹತ್ತಿರ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿ ದೂ.ಸಂ. 08272-225528/220214 ನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.