ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಔಷಧ ಒದಗಿಸುವ ಗುರಿಯೊಂದಿಗೆ ಜನೌಷಧ ಮಳಿಗೆ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಕನಸಿನ ಯೋಜನೆ ಇದಾಗಿದ್ದು ಜನೌಷಧ ಮಳಿಗೆಗಳಲ್ಲಿ 1250 ಔಷಧಗಳು, 204 ಮೆಡಿಕಲ್ ಪರಿಕರಗಳು ಲಭ್ಯವಿವೆ.
ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಯಾರು ತೆರೆಯಬಹುದು..?
ರಾಜ್ಯದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಇತರೆ ಸಹಕಾರ ಸಂಘಗಳು ಕೇಂದ್ರಗಳನ್ನು ತೆರೆಯಬಹುದು.
ಖಾಸಗಿ ವ್ಯಕ್ತಿಗಳು ಜನೌಷಧ ಮಳಿಗೆ ತೆರೆಯಲು ಅವಕಾಶವಿದೆ. ಇದಕ್ಕೆ ಬೇಕಾದ ಸಹಕಾರ ಹಾಗೂ ಮಾಹಿತಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನೀಡಲಿದೆ.
ಶೇಕಡ 20 ರಷ್ಟು ಲಾಭಾಂಶ
ಜನೌಷಧ ಕೇಂದ್ರ ತೆರೆದು ವ್ಯವಹರಿಸಿದಲ್ಲಿ ವ್ಯವಹಾರದ ಶೇಕಡ 20 ರಷ್ಟು ಲಾಭಾಂಶವನ್ನು ಪಡೆಯಬಹುದಾಗಿದೆ. ಅಲ್ಲದೆ, ವ್ಯವಹಾರದ ಮೇಲೆ ಬಿಪಿಪಿಐ ಸಂಸ್ಥೆಯು ಪ್ರೋತ್ಸಾಹ ಧನವನ್ನು ನೀಡುತ್ತದೆ. ಇದಕ್ಕೆ ಷರತ್ತುಗಳು ಅನ್ವಯಿಸುತ್ತದೆ.
ಮಳಿಗೆ ತೆರೆಯಲು ಬೇಕಾದ ದಾಖಲೆಗಳು
ಜನೌಷಧ ಕೇಂದ್ರಗಳನ್ನು ತೆರೆಯಲು ಡಿ ಫಾರ್ಮ್ ಇಲ್ಲವೇ ಬಿ ಫಾರಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಸಹಕಾರ ಸಂಘಗಳು ನೇಮಿಸಿಕೊಳ್ಳುತ್ತವೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸಹಕಾರ ಸಂಘದ ಬ್ಯಾಂಕ್ ಖಾತೆಯ ಆರು ತಿಂಗಳ ಸ್ಟೇಟ್ಮೆಂಟ್, ಸಹಕಾರ ಸಂಘದ ಆದಾಯ ಪ್ರಮಾಣ ಸಲ್ಲಿಸಬೇಕಿದೆ.
ಡಿ ಫಾರ್ಮ್, ಬಿ ಫಾರ್ಮ್ ವಿದ್ಯಾರ್ಹತೆ ಹೊಂದಿದವರು ಕೂಡ ಜನೌಷಧ ಕೇಂದ್ರ ತೆರೆಯಬಹುದಾಗಿದ್ದು, ಮಹಾಮಂಡಲದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಮಾಹಿತಿಗಾಗಿ 080 22254862, 94498 64442, 94498 64444, 94498 64411 ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.