ಕೊಡಗು : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಅರ್ಜಿ ಆಹ್ವಾನಿಸಿದೆ.
(ಪಿಎಂಎಂಎಸ್ವೈ) ಯೋಜನೆಯಡಿ (1.4) ಹೊಸ ಮೀನುಕೃಷಿ ಕೊಳಗಳ ನಿರ್ಮಾಣ ಮತ್ತು (1.5) ಹೂಡಿಕೆ ವೆಚ್ಚಕ್ಕೆ ಸಹಾಯ (ಸಾಮಾನ್ಯ, ಮಹಿಳೆ ಮತ್ತು ಪ.ಜಾತಿ ಫಲಾನುಭವಿಗಳಿಗೆ ಮಾತ್ರ). ಮತ್ತು (2.7) ಕಡಲಚಿಪ್ಪು ಕೃಷಿ (ಮಸ್ಸೆಲ್ಸ್, ಕ್ಲಾಮ್ಸ್, ಮುತ್ತು ಇತ್ಯಾದಿ) (1-ಮಹಿಳೆ). (5.4) ಬ್ಯಾಕ್ಯಾರ್ಡ್ ಮಿನಿ ಆರ್.ಎ.ಎಸ್ ಘಟಕಗಳ ಸ್ಥಾಪನೆ(1-ಮಹಿಳೆ) ಹಾಗೂ (6.5) ಮೋಟಾರ್ ಸೈಕಲ್ ಮತ್ತು ಐಸ್ಬಾಕ್ಸ್(1-ಮಹಿಳೆ). ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ, 12 ಕೊನೆ ದಿನವಾಗಿದೆ.
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ರಷ್ಟು ಮತ್ತು ಶೇ.60ರಷ್ಟು, ಪ.ಜಾತಿ ಮತ್ತು ಮಹಿಳಾ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ಪೆÇನ್ನಂಪೇಟೆ ಮತ್ತು ಸೋಮವಾರಪೇಟೆ ಅವರನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.