ಉದ್ಯೋಗ ಮಾಹಿತಿ : ಕೊಡಗು ಜಿಲ್ಲಾ ಗೃಹರಕ್ಷಕದಳ ಮಡಿಕೇರಿ ಕಚೇರಿಯಲ್ಲಿ 2023-24ನೇ ಸಾಲಿಗೆ ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಸ್ಥಾನಗಳಿಗೆ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ನಿವಾಸಿಯಾಗಿರುವ 19 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಹಾಗೂ 10ನೇ ತರಗತಿ ತೇರ್ಗಡೆ ಹೊಂದಿರುವ ದೃಢಕಾಯರಾಗಿರುವ ಪುರುಷ/ ಮಹಿಳಾ ಅಭ್ಯರ್ಥಿಗಳು ಫೆಬ್ರವರಿ, 15 ರವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಯಸುವ ಸದಸ್ಯರು ಜಿಲ್ಲಾ ಗೃಹರಕ್ಷಕದಳ ಕಚೇರಿ, ಡೈರಿಫಾರಂ ಮಡಿಕೇರಿ (ದೂ.ಸಂ. 08272-228427) ಮತ್ತು ಕೊಡಗು ಜಿಲ್ಲಾ ಗೃಹರಕ್ಷಕದಳದ ಸಹಾಯಕ ಬೋಧಕರಾದ ಅಕ್ಷಯ್ಕುಮಾರ್ ಡಿ. ಮೊ.ಸಂ.9844008820 ಹಾಗೂ ಗೃಹರಕ್ಷಕದಳದ ಘಟಕ ಕಚೇರಿಗಳ ಘಟಕಾಧಿಕಾರಿಗಳನ್ನು ಸಂಪರ್ಕಿಸಬಹುದು.
ಘಟಕಾಧಿಕಾರಿಗಳ ವಿವರ : ಮಡಿಕೇರಿ ಘಟಕ ವೈ.ಎನ್.ಕವನ್ ಕುಮಾರ್ 9448204356, ಭಾಗಮಂಡಲ ಘಟಕ ಎನ್.ಪಿ.ಲೋಕನಾಥ 9108209941, ವಿರಾಜಪೇಟೆ ಘಟಕ ಮದಬ್ ಬೈರಾಗಿ 819756103, ಕುಶಾಲನಗರ ಘಟಕ ಬಿ.ಕೆ.ಪುಟ್ಟರಾಜು 9242116174, ಸೋಮವಾರಪೇಟೆ ಘಟಕ ಎಚ್.ಕೆ.ತ್ಯಾಗರಾಜು 9481431221, ಶಾಂತಳ್ಳಿ ಘಟಕ ಎಸ್.ಆರ್.ದೇವರಾಜು 9482729233, ಶನಿವಾರಸಂತೆ ಘಟಕ ಈ.ಬಿ.ಲೋಕೇಶ 9902047075 ಇಲ್ಲಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಘಟಕಾಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಪಡೆದು ಹತ್ತಿರದ ಘಟಕಾಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಕೆ.ಎಸ್.ಸುಂದರ್ ರಾಜ್ ಅವರು ತಿಳಿಸಿದ್ದಾರೆ.